ಮಹೀಂದ್ರ ಏರ್‍ಬಸ್ ಜಂಟಿ ಉದ್ಯಮ

ಭಾರತೀಯ ಸೇನೆಗೆ ಹೆಲಿಕಾಪ್ಟರ್‍ಗಳನ್ನು ತಯಾರಿಸಲು ಜಗತ್ತಿನ ಅತಿದೊಡ್ಡ ವಿಮಾನ ತಯಾರಿಕಾ ಕಂಪನಿ ಏರ್‍ಬಸ್ ಮತ್ತು ಭಾರತದ...
ಹೆಲಿಕಾಪ್ಟರ್‍
ಹೆಲಿಕಾಪ್ಟರ್‍

ನವದೆಹಲಿ: ಭಾರತೀಯ ಸೇನೆಗೆ ಹೆಲಿಕಾಪ್ಟರ್‍ಗಳನ್ನು ತಯಾರಿಸಲು ಜಗತ್ತಿನ ಅತಿದೊಡ್ಡ ವಿಮಾನ ತಯಾರಿಕಾ ಕಂಪನಿ ಏರ್‍ಬಸ್ ಮತ್ತು ಭಾರತದ ಮಹೀಂದ್ರ ಜಂಟಿ ಉದ್ಯಮ ಸ್ಥಾಪಿಸಲಿವೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ರಕ್ಷಣಾ ಇಲಾಖೆಗೆ ಹೆಲಿಕಾಪ್ಟರ್‍ಗಳನ್ನು ತಯಾರಿಸಿಕೊಡುವ ಮೊಟ್ಟ ಮೊದಲ ಖಾಸಗಿ ಉದ್ಯಮ ಇದಾಗಲಿದೆ ಎಂದು ಎರಡೂ ಕಂಪನಿಗಳು ಹೇಳಿವೆ. ಈ ಜಂಟಿ ಉದ್ಯಮ ಭಾರತದ ಪರಿಸ್ಥಿತಿಗೆ ಅನುಗುಣವಾಗಿ ಹೆಲಿಕಾಪ್ಟರ್ ಗಳನ್ನು ತಯಾರಿಸಲಿವೆ. ಗುಪ್ತಚಾರ, ಕಣ್ಗಾವಲು ಹೆಲಿಕಾಪ್ಟರ್ ಸೇರಿದಂತೆ ನೌಕಾಪಡೆಗೆ ಅಗತ್ಯವಾದ ಬಹೋಪಯೋಗಿ ಹೆಲಿಕಾಪ್ಟರ್‍ಗಳನ್ನು ನಿರ್ಮಿಸಲಾಗುವುದು. ಈ ಜಂಟಿ ಉದ್ಯಮ ದೇಶದೊಳಗೆ ಹೈಟೆಕ್   ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರೊಂದಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಭಾರತಕ್ಕೆ ತರಲಿದೆ ಎಂದು ಎರಡೂ ಕಂಪನಿಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com