ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಜೂನ್‍ನಲ್ಲಿ ಸೇವಾ ವಲಯ ಹಿನ್ನಡೆ

ಸತತ ಎರಡನೇ ತಿಂಗಳು ಜೂನ್‍ನಲ್ಲಿಯೂ ಸೇವಾ ವಲಯದ ಅಭಿವೃದ್ಧಿ ಹಿನ್ನಡೆ ಕಂಡಿದೆ. ಕಳೆದ ಎರಡು ತಿಂಗಳಿನಿಂದ ಪ್ರಗತಿ ದರ 50 ಅಂಶಗಳಿಗಿಂತ...
Published on

ನವದೆಹಲಿ: ಸತತ ಎರಡನೇ ತಿಂಗಳು ಜೂನ್‍ನಲ್ಲಿಯೂ ಸೇವಾ ವಲಯದ ಅಭಿವೃದ್ಧಿ ಹಿನ್ನಡೆ ಕಂಡಿದೆ. ಕಳೆದ ಎರಡು ತಿಂಗಳಿನಿಂದ ಪ್ರಗತಿ ದರ 50 ಅಂಶಗಳಿಗಿಂತ ಕಡಿಮೆ ಇದೆ ಎಂದು ಎಚ್‍ಎಸ್‍ಬಿಸಿ ಸಮೀಕ್ಷೆ ಶುಕ್ರವಾರ ಹೇಳಿದೆ. ಸೇವಾ ವಲಯದ ಪ್ರಗತಿಮೇ ತಿಂಗಳಲ್ಲಿ 49.60 ಅಂಶಗಳಿದ್ದದ್ದು ಜೂನ್ ತಿಂಗಳಲ್ಲಿ 47.7ಕ್ಕೆ ಇಳಿದಿದೆ. ಇದು 14 ತಿಂಗಳಲ್ಲೇ ಕನಿಷ್ಠ ಬೆಳವಣಿಗೆಯಾಗಿದೆ.
ಒಂದು ಕಡೆ ಸೇವಾ ವಲಯದ ಪ್ರಗತಿ ಕುಂಠಿತಗೊಂಡಿದ್ದರೆ ಮತ್ತೊಂದು ಕಡೆ ತಯಾರಿಕಾ ವಲಯವೂ ಹಿನ್ನಡೆ ಕಂಡಿದೆ. ಇದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಮುಖ ಸಾಲದ ಮೇಲಿನ ಬಡ್ಡಿದರಗಳನ್ನು ಇಳಿಸಬೇಕೆಂದು ಉದ್ಯಮ ವಲಯದ ಒತ್ತಡ ಹೇರಿದೆ. ಸೇವಾ ಕಂಪನಿಗಳಿಗೆ ಸಿಕ್ಕಿರುವ ಕೆಲಸದ ಆರ್ಡರ್‍ಗಳನ್ನು ಆಧರಿಸಿ ಎಚ್ ಎಸ್‍ಬಿಸಿ ಸಮೀಕ್ಷೆ ನಡೆಸಿ ಅಂಕಿಅಂಶಗಳನ್ನು ನೀಡಲಿದೆ. ಈ ಸಮೀಕ್ಷೆಯಲ್ಲಿ ಪ್ರಗತಿ ಪ್ರಮಾಣ 50 ಅಂಕಗಳಿಗಿಂತಲೂ ಮೇಲಿದ್ದರೆ ಅದು ಪ್ರಗತಿಯ ಹಾದಿಯಲ್ಲಿದೆ ಎಂದು ಪರಿಗಣಿಸಲಾಗುವುದು. 50ಕ್ಕಿಂತಲೂ ಕಡಿಮೆಯಾದಲ್ಲಿ ಹಿನ್ನಡೆ ಎಂದು
ಪರಿಗಣಿಸಲಾಗುವುದು. ಕಳೆದ ಮೇ ತಿಂಗಳಿನಿಂದಲೂ ಸೇವಾ ವಲಯದ ಚಟುವಟಿಕೆಗಳು ಇಳಿಮುಖ ಕಂಡಿರುವುದರ ಜೊತೆಗೆ ಹೊಸ ಒಪ್ಪಂದಗಳು ಏರ್ಪಡುವುದೂ ಕಡಿಮೆಯಾಗಿದೆ. ಇದು
ತುಂಬಾ ಬೇಸರದ ವಿಷಯವಾಗಿದೆ ಎಂದು ಎಚ್‍ಎಸ್‍ಬಿಸಿ ಆರ್ಥಿಕ ತಜ್ಞರಾಗಿರುವ ಪೊಲಿಯಾನ ಡಿ ಲಿಮ ಹೇಳಿದ್ದಾರೆ. ಸ್ಪರ್ಧಾತ್ಮಕತೆ ಮತ್ತು ಹೆಚ್ಚಿದ ಬಿಸಿ ಹವಾಮಾನ ಸೇವಾ ವಲಯದ ಮೇಲೆ ಪರಿಣಾಮ ಬೀರಿದೆ. ಹಾಗಿದ್ದರೂ ಮುಂದಿನ ತಿಂಗಳುಗಳಲ್ಲಿ ಪರಿಸ್ಥಿತಿ ಬದಲಾಗಬಹುದು ಎಂಬ ವಿಶ್ವಾಸವನ್ನು ಕಂಪನಿಗಳು ಹೊಂದಿವೆ ಎಂದು ಲಿಮ ತಿಳಿಸಿದ್ದಾರೆ. ಭಾರತದಲ್ಲಿನ ವಾಣಿಜ್ಯ ಪರಿಸ್ಥಿತಿ ದುರ್ಬಲವಾಗಿದೆ ಎಂದು ಜಾಗತಿಕ ವಿಶ್ಲೇಷಣಾ ಸಂಸ್ಥೆಗಳಾದ ಮೂಡಿಸ್ ಮತ್ತು ಪೀಚ್ ಈಗಾಗಲೆ ಹೇಳಿವೆ. ಹೀಗಾಗಿ ಆರ್‍ಬಿಐ ಬಡ್ಡಿದರಗಳನ್ನು ಕಡಿತಗೊಳಿಸಬೇಕೆಂಬ
ಒತ್ತಡ ಎಲ್ಲ ಕಡೆಯಿಂದಲೂ ಬರುತ್ತಿದೆ. ಜೂನ್ ತಿಂಗಳಲ್ಲಿ ಸೇವೆ ಮತ್ತು ತಯಾರಿಕಾ ವಲಯದ ಸಂಯುಕ್ತ ಸೂಚ್ಯಂಕವೂ ಇಳಿಕೆ ದಾಖಲಿಸಿದ್ದು ಕಳೆದ 15 ತಿಂಗಳಲ್ಲೇ ಕಡಿಮೆಯಾಗಿದೆ. ಜಾಗತಿಕ ಆರ್ಥಿಕ ವಿಶ್ಲೇಷಣಾ ಸಂಸ್ಥೆ ಮೂಡಿಸ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ ವರದಿಯಲ್ಲಿ ದೇಶದ ಗ್ರಾಮೀಣ ಜನರ ಖರೀದಿ ಶಕ್ತಿ ಕುಂಠಿತವಾಗಲಿದೆ ಎಂದು ಎಚ್ಚರಿಸಿತ್ತು. ಎರಡೂ ವಲಯಗಳು ಇಳಿಮುಖ ಕಂಡಿರುವುದು ಆರ್‍ಬಿಐ ತನ್ನ ಪ್ರಮುಖ ಸಾಲಗಳ ಮೇಲಿನ ಬಡ್ಡಿದರಗಳನ್ನು ಇಳಿಸುವ ಒತ್ತಡಕ್ಕೆ ಸಿಲುಕಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದಾರೆ. ಈ ಹಿಂದೆ ಆರ್‍ಬಿಐ ಜೂನ್.2ರಂದು ನಡೆದ ತ್ರೈಮಾಸಿಕ ಸಭೆಯಲ್ಲಿ ರೆಪೊ ದರವನ್ನು ಶೇ.0.25ರಷ್ಟು ಕಡಿತಗೊಳಿಸಿತ್ತು. ಮುಂದಿನ ತಿಂಗಳುಗಳಲ್ಲಿನ ಮತ್ತೆ ಕಡಿತಗೊಳಿಸುವ ಸಾಧ್ಯತೆಗಳು ಇಲ್ಲ ಎಂತಲೂ ಹೇಳಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com