
ನವದೆಹಲಿ: ಸತತವಾಗಿ ಕುಸಿತ ಕಂಡ ಚಿನ್ನ ಬುಧವಾರದ ವಹಿವಾಟಿನಲ್ಲಿ 10 ಗ್ರಾಂ.ಗೆ 330 ರುಪಾಯಿ ನಷ್ಟ ಕಂಡು ರು.26,170ಕ್ಕೆ ವಹಿವಾಟು ಮುಗಿಸಿತು.
ಇದರೊಂದಿಗೆ ಕಳೆದ ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಚಿನ್ನದ ದರ ಕುಸಿಯಿತು. ಬೆಳ್ಳಿ ಸಹ ಮಾರಾಟ ಒತ್ತಡಕ್ಕೆ ಸಿಲುಕಿತ್ತು. ಬುಧವಾರದ ವಹಿವಾಟಿನಲ್ಲಿ 1,550 ರುಪಾಯಿ ನಷ್ಟದೊಂದಿಗೆ ರು.34,450ಕ್ಕೆ ತಲುಪಿತು.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಮುಖ ಕಂಡಿದ್ದು ದೇಶೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತಿದೆ. ಇದರೊಂದಿಗೆ ಷೇರು ಮಾರುಕಟ್ಟೆಗಳು ಚೇತರಿಕೆ ಕಂಡಿದ್ದರಿಂದ ಹೂಡಿಕೆದಾರರು ಅತ್ತ ಮುಖ ಮಾಡಿದ್ದು ದರ ಇಳಿಯಲು ಮತ್ತೊಂದು ಕಾರಣವಾಗಿದೆ.
Advertisement