ವರ್ತಕರಿಗೆ ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿ ವ್ಯವಸ್ಥೆ

ಭಾರತದಲ್ಲಿ ವಹಿವಾಟು ನಡೆಸುವುದನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಆಮದು...
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್
Updated on

ನವದೆಹಲಿ: ಭಾರತದಲ್ಲಿ ವಹಿವಾಟು ನಡೆಸುವುದನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಆಮದು ಮತ್ತು ರಫ್ತು ಉದ್ಯಮಿಗಳು
ವಿದೇಶಿ ವಾಣಿಜ್ಯ ನಿರ್ದೇಶನಾಲಯದಿಂದ ಪಡೆಯುವ ಸೇವೆಗಳಿಗೆ ಇನ್ನು ಮುಂದೆ ಡೆಬಿಟ್  ಅಥವಾ ಕ್ರೆಡಿಟ್  ಕಾರ್ಡ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ. ಈ ಹೊಸ ವ್ಯವಸ್ಥೆ ಈ ವಾರದಿಂದ ಜಾರಿಗೆ ಬಂದಿದ್ದು ಉದ್ಯಮಿಗಳಿಗೆ ನಿರಾಳ ತಂದಿದೆ. ಇದುವರೆಗೂ ಉದ್ಯಮಿಗಳು ನೇರವಾಗಿ ನಗದು ರೂಪದಲ್ಲಿ ಇಲ್ಲವೆ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕಾಗಿತ್ತು.
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಲು ಅಗತ್ಯವಾದ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಹೊಸ ವಾಣಿಜ್ಯ ಕಾರ್ಯದರ್ಶಿ
ರೀಟಾ ತೋಷಿಯಾಈ ವಾರದಲ್ಲಿ ಈ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ವಿದೇಶಿ ವಾಣಿಜ್ಯ ಪ್ರಧಾನ ನಿರ್ದೇಶನಾಲಯ (ಡಿಜಿಎಫ್ ಟಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರ್ತಕರು ಎಲ್ಲ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‍ಗಳಲ್ಲಿ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಆಮದು ಮತ್ತು ರಫ್ತು  ವಹಿವಾಟಿಗೆ ಸಂಬಂಧಿಸಿದಂತೆ ಡಿಜಿಎಫ್ ಟಿಗೆ ಪ್ರತಿ ತಿಂಗಳು ಲಕ್ಷಾಂತರ ಅರ್ಜಿಗಳು ಬರುತ್ತವೆ. ರು.100 ರಿಂದ ರು.10 ಸಾವಿರವರೆಗೂ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ. ಭಾರತೀಯ ರಫ್ತು  ಸಂಘಟನೆಗಳ ಒಕ್ಕೂಟ (ಎಫ್ಐಇಒ) ಕೇಂದ್ರ ವಾಣಿಜ್ಯ ಸಚಿವಾಲಯದ ಈ ನಡೆಯನ್ನು ಸ್ವಾಗತಿಸಿದ್ದು, ಇದರಿಂದ ವಹಿವಾಟು ವೆಚ್ಚ ಕಡಿಮೆಯಾಗಲಿದೆ ಎಂದಿದೆ. ಪಾನ್ ಮತ್ತಿತರ ವಿವರಗಳನ್ನು ಪರಿ ಶೀಲಿಸಲು ಡಿಜಿಎಫ್ ಟಿ ಆದಾಯ ತೆರಿಗೆ ಇಲಾಖೆ ಮತ್ತು ಕಂಪನಿ ವ್ಯವ ಹಾರಗಳ ¸ಸಚಿವಾಲಯದೊಂದಿಗೆ ಸಂಪರ್ಕ ಹೊಂದಿರುವ ಹೊಸ ವ್ಯವಸ್ಥೆಯೊಂದನ್ನು  ಅಭಿವೃದ್ಧಿ  ಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಇದು ಜಾರಿಗೆ ಬಂದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಅರ್ಜಿಗಳನ್ನು ವಿಲೇವಾರಿ
ಮಾಡುವ ಅವಧಿ ತುಂಬಾ ಕಡಿಮೆಯಾಗಲಿದೆ. ಉದ್ಯಮಿಗಳ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಅನುವಾಗುವಂತೆ ಪೇಪರ್ ಕೆಲಸ ಕಡಿಮೆ ಮಾಡಲು ಕಂದಾಯ ಮತ್ತಿತರ ಇಲಾಖೆಗಳೊಂದಿಗೂ
ಸಮಾಲೋಚನೆ ನಡೆಸುತ್ತಿದೆ. ಸರಳವಾಗಿ ವಹಿವಾಟು ನಡೆಸಲು ವ್ಯವಸ್ಥೆ ಇರುವ ದೇಶಗಳ ಸಾಲಿನಲ್ಲಿ ಭಾರತ ಸದ್ಯ 142ನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com