ಟಿಸಿಎಸ್ ಲಾಭ ಶೇ.2.08 ಏರಿಕೆ

ದೇಶದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆ ಟಿಸಿಎಸ್ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್)ದಲ್ಲಿ...
ಟಿಸಿಎಸ್
ಟಿಸಿಎಸ್

ಮುಂಬೈ: ದೇಶದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆ ಟಿಸಿಎಸ್ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್)ದಲ್ಲಿ ರು. 5,684 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ ಲಾಭಕ್ಕೆ ಹೋಲಿಸಿದರೆ ಶೇ.2.08ರಷ್ಟು ಏರಿಕೆ ದಾಖಲಿಸಿದೆ. ಕಂಪನಿಯ ಕ್ರೋಡೀಕೃತ ಆದಾಯದಲ್ಲಿ ಶೇ.16.08ರಷ್ಟು ಏರಿಕೆ ಕಂಡಿದ್ದು ರು. 25,668 ಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ ರು.22,111 ಕೋಟಿ ಆದಾಯ ಗಳಿಸಿತ್ತು. ಉತ್ತರ ಅಮೆರಿಕ, ಹಣಕಾಸು, ರಿಟೇಲ್ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು ಕಂಪನಿ ಆದಾಯ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಕಂಪನಿ ಸಿಇಒ ಮತ್ತು ಎಂಡಿ ಎನ್.ಚಂದ್ರಶೇಖರನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com