ಜಿ.ಎಸ್.ಟಿ, ಸ್ಮಾರ್ಟ್ ಸಿಟಿ ಯೋಜನೆ ಜಾರಿಯಿಂದ ಶೇ.8 ರಷ್ಟು ಆರ್ಥಿಕ ಅಭಿವೃದ್ಧಿ ಸಾಧ್ಯ: ಅರುಣ್ ಜೇಟ್ಲಿ

ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ) ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳು ಕಾರ್ಯರೂಪಕ್ಕೆ ಬಂದರೆ ಶೇ.8 ರಷ್ಟು ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಅರುಣ್ ಜೇಟ್ಲಿ
ಜಿ.ಎಸ್.ಟಿ, ಸ್ಮಾರ್ಟ್ ಸಿಟಿ ಯೋಜನೆ ಜಾರಿಯಿಂದ  ಶೇ.8 ರಷ್ಟು ಆರ್ಥಿಕ ಅಭಿವೃದ್ಧಿ ಸಾಧ್ಯ: ಅರುಣ್ ಜೇಟ್ಲಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ) ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳು ಕಾರ್ಯರೂಪಕ್ಕೆ ಬಂದರೆ ಶೇ.8 ರಷ್ಟು ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಪ್ರಮಾಣ ಕುಸಿದಿರಬಹುದು ಆದರೆ ಶೇ.8 -10 ರಷ್ಟು ಅಭಿವೃದ್ಧಿ ದರ ಸಾಧಿಸುವುದು ಕಷ್ಟ ಸಾಧ್ಯವಲ್ಲ ಎಂದು ಅರುಣ್ ಜೇಟ್ಲಿ ಹೇಳ್ದಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಧನಸಹಾಯದ  ಅಗತ್ಯವಿದ್ದು ಪ್ರಸಕ್ತ ವರ್ಷ ತೈಲ ಬೀಜಗಳ ಉತ್ಪಾದನೆ ಹೆಚ್ಚಾಗಿರಲಿದೆ ಎಂದು ಜೇಟ್ಲಿ ಹೇಳಿದ್ದಾರೆ.

 ಆರ್ಥಿಕ ಸ್ಥಿತಿಯೂ ಕಳೆದ ವರ್ಷಕ್ಕಿಂತ ಅನುಕೂಲಕರವಾಗಿರಲಿದ್ದು,  ಜುಲೈ 21 ರಿಂದ ಸಂಸತ್ ನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು ಜಿ.ಎಸ್.ಟಿ ಮಸೂದೆಗೆ ಅಂಗೀಕಾರ ದೊರೆಯಲಿದೆ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಇದೆ ವೇಳೆ ಭಾರತ ಜಾಗತಿಕ ಆರ್ಥಿಕತೆಯ ಉಜ್ವಲ ತಾಣ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com