ವಿದೇಶಿ ಹೂಡಿಕೆ ನಿಯಮ ಸರಳಗೊಳಿಸಿದ ಕೇಂದ್ರ ಸರ್ಕಾರ

ಬೃಹತ್ ಕಂಪೆನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಅನುಕೂಲವಾಗಲು ಭಾರತ ವಿದೇಶಿ ಹೂಡಿಕೆ ನಿಯಮಗಳನ್ನು ಸರಳಗೊಳಿಸಿದೆ...
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

ನವದೆಹಲಿ: ಬೃಹತ್ ಕಂಪೆನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಅನುಕೂಲವಾಗಲು ಭಾರತ ವಿದೇಶಿ ಹೂಡಿಕೆ ನಿಯಮಗಳನ್ನು ಸರಳಗೊಳಿಸಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಸಂಯುಕ್ತ ಹೂಡಿಕೆ(composite cap) ಯಡಿ ವಿದೇಶಿ ನೇರ ಹೂಡಿಕೆ, ವಿದೇಶಿ ಖಾತೆ ಹೂಡಿಕೆ ಮತ್ತು ಅನಿವಾಸಿ ಭಾರತೀಯರ ಹೂಡಿಕೆಗಳನ್ನು ಒಟ್ಟಿಗೆ ತರಲಾಗುವುದು ಎಂದು ಅವರು ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಹೇಳಿದರು.

ಸಚಿವರು ಹೀಗೆ ಪ್ರಕಟಿಸಿದ ಕೂಡಲೇ ಬ್ಯಾಂಕಿಂಗ್ ವಲಯದ ಷೇರುಗಳು ಏರಿಕೆ ಕಂಡುಬಂದವು.

ಭಾರತದಲ್ಲಿ ವಿದೇಶಿ ಬಂಡವಾಳ ಹೆಚ್ಚು ಹರಿದುಬರಲು ಮತ್ತು ಉದ್ಯೋಗವಕಾಶ ಜಾಸ್ತಿಯಾಗಲು ವಿದೇಶಿ ಬಂಡವಾಳ ಹೂಡಿಕೆ ನಿಯಮಗಳನ್ನು ಸರಳಗೊಳಿಸುವಂತೆ ವಾಣಿಜ್ಯ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.
 
ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ, ಅಧಿಕಾರಿಗಳ ಅನುಮೋದನೆಯಿಲ್ಲದೆ, ಔಶಧಿ ಮತ್ತು ರೈಲ್ವೆ ವಲಯಗಳಲ್ಲಿ ಶೇಕಡಾ 100ರಷ್ಟು  ವಿದೇಶಿ ಹೂಡಿಕೆಗೆ ಅನುಮತಿ ನೀಡಿದೆ. ವಿಮೆ ಮತ್ತು ರಕ್ಷಣಾ ವಲಯಗಳಲ್ಲಿ ಶೇಕಡಾ 49ರಷ್ಟು ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com