
ನವದೆಹಲಿ: ಭಾರತದ ಮನರಂಜನಾ ಕ್ಷೇತ್ರದ ಪ್ರಮುಖ ಜಾಗತಿಕ ಕಂಪನಿ ಎರೋಸ್ ಇಂಟರ್‍ನ್ಯಾಷನಲ್ ಷೇರು ದರಗಳು ಗಣನೀಯ ಏರಿಕೆ ಕಂಡಿವೆ. ಸಲ್ಮಾನ್ ಖಾನ್ ನಾಯಕರಾಗಿರುವ ಬಜರಂಗಿ ಭಾಯಿಜಾನ್ ಚಿತ್ರದ ಅಂತಾರಾಷ್ಟ್ರೀಯ ವಿತರಣೆ ಹಕ್ಕುಗಳನ್ನು ಎರೋಸ್ ಪಡೆದಿತ್ತು. ಚಿತ್ರ ಭರ್ಜರಿಯಾಗಿ ಪ್ರದರ್ಶನವಾಗುತ್ತಿರುವುದರಿಂದ ಕಂಪನಿ ಷೇರುಗಳು ಏರಿಕೆ ಕಂಡಿವೆ. ಸಲ್ಮಾನ್ ಖಾನ್ ಮತ್ತು ರಾಕ್‍ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಿಸಿದ್ದರು. ಕರೀನಾ ಕಪೂರ್ ಮತ್ತು ನವಾಜುದ್ದಿನ್ ಸಿದ್ದಿಕಿ ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಶುಕ್ರವಾರದ ವಹಿವಾಟಿನಲ್ಲಿ ಎರೋಸ್ ಇಂಟರ್‍ನ್ಯಾಷನಲ್ ಷೇರು ದರ ರು.629.85ಕ್ಕೆ ಅಂತ್ಯ ಕಂಡಿದೆ. ಗುರುವಾರ ಅಂತ್ಯಗೊಂಡಿದ್ದ ರು. 607.80ಕ್ಕೆ ಹೋಲಿಸಿದರೆ ಶೇ.4.20ರಷ್ಟು ಏರಿಕೆ ದಾಖಲಿಸಿದೆ.
Advertisement