ಮಾರಾಟವಾಗದ 7 ಲಕ್ಷ ಪ್ಲ್ಯಾಟ್

ದೇಶದ ಎಂಟು ಪ್ರಮುಖ ನಗರಗಳಲ್ಲಿ 7 ಲಕ್ಷಕ್ಕಿಂತಲೂ ಹೆಚ್ಚು ಮನೆಗಳು ಮಾರಾಟವಾಗದೆ ಉಳಿದಿವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ಎಂಟು ಪ್ರಮುಖ ನಗರಗಳಲ್ಲಿ 7 ಲಕ್ಷಕ್ಕಿಂತಲೂ ಹೆಚ್ಚು ಮನೆಗಳು ಮಾರಾಟವಾಗದೆ ಉಳಿದಿವೆ. ಈ ಉಳಿಕೆಯನ್ನು ಮಾರಾಟ ಮಾಡಲು ಮೂರು ವರ್ಷಗಳಿ ಗಿಂತಲೂ ಹೆಚ್ಚು ಕಾಲ ಬೇಕಾಗಲಿದೆ ಎಂದು ರಿಯಾಲ್ಟಿ ಬ್ರೋಕರೇಜ್ ಕಂಪನಿ ನೈಟ್ ಫ್ರಾಂಕ್ ಇಂಡಿಯಾ ಹೇಳಿದೆ. ಜೂನ್ ಅಂತ್ಯದವರೆಗೂ ದೆಹಲಿ ಸುತ್ತಮುತ್ತ 1.9 ಲಕ್ಷ ಮನೆಗಳು ಮಾರಾಟವಾಗದೆ ಉಳಿದಿವೆ. ಉಳಿದಂತೆ ಮುಂಬೈ, ಬೆಂಗಳೂರು, ಪುಣೆ, ಕೋಲ್ಕತ್ತ, ಚೆನ್ನೈ, ಹೈದರಾಬಾದ್ ಮತ್ತು ಅಹಮದಾಬಾದ್ ನಗರಗಳಲ್ಲಿ ಮಾರಾಟ ಹಿನ್ನಡೆ ಕಂಡಿದೆ.

ಕಳೆದ 3-4 ವರ್ಷಗಳಿಂದ ವಸತಿ ಮಾರುಕಟ್ಟೆ ನಿಧಾನ ಗತಿಯಲ್ಲಿದೆ. ಮುಂದಿನ ಆರು ತಿಂಗಳಲ್ಲೂ ಇದು ಚೇತರಿಕೆ ಕಾಣುವ ಸೂಚನೆಗಳು ಇಲ್ಲ. ಫ್ಲ್ಯಾಟ್ ಗಳ  ಮಾರಾಟ ಪ್ರಮಾಣ ಶೇ.19ರಷ್ಟು ಕುಸಿದಿದೆ. ಕಳೆದ ಆರು ತಿಂಗಳಲ್ಲಿ ಹೊಸ ಅಪಾರ್ಟ್‍ಮೆಂಟ್‍ಗಳ ಉದ್ಘಾಟನೆಯಲ್ಲೂ ಶೇ.40ರಷ್ಟು ಕುಸಿದಿದೆ ಎಂದು ಕಂಪನಿ ಹೇಳಿದೆ. ದೇಶದ ಆರ್ಥಿಕತೆ ಉತ್ತಮವಾಗಿದ್ದರೂ ವಸತಿ ಕ್ಷೇತ್ರದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಈ ವರ್ಷದ ಅಂತ್ಯದವರೆಗೂ ಯಾವುದೇ ಪ್ರಗತಿ ಕಾಣುವ ಸಾಧ್ಯತೆಗಳಿಲ್ಲ ಎಂದು ಸಂಸ್ಥೆಯ ಸಿಎಂಡಿ ಶಿಶಿರ್ ಬೈಜಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com