ಸಹಾರಾ ಎಂಎಫ್ ನೋಂದಣಿ ರದ್ದು

ಸಹಾರಾ ಕಂಪನಿಗೆ ಮತ್ತೊಂದು ಹಿನ್ನಡೆಯಾಗಿದೆ. ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ ಸೆಬಿ ಸಹಾಯ ಮ್ಯೂಚುವಲ್ ಫಂಡ್ ನೋಂದಣಿಯನ್ನು ...
ಸುಬ್ರತೋ ರಾಯ್
ಸುಬ್ರತೋ ರಾಯ್

ಮುಂಬೈ: ಸಹಾರಾ ಕಂಪನಿಗೆ ಮತ್ತೊಂದು ಹಿನ್ನಡೆಯಾಗಿದೆ. ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ ಸೆಬಿ ಸಹಾಯ ಮ್ಯೂಚುವಲ್ ಫಂಡ್ ನೋಂದಣಿಯನ್ನು ರದ್ದುಗೊಳಿಸಿದೆ. ಈ ವಹಿವಾಟು ನಡೆಸಲು ಕಂಪನಿ ಯೋಗ್ಯ ಮತ್ತು ಸೂಕ್ತವಾಗಿಲ್ಲ ಎಂದು ಹೇಳಿದ್ದು, ಈ ಸಂಸ್ಥೆಯಲ್ಲಿನ ಹಣವನ್ನು ಇತರೆ ಸಂಸ್ಥೆಗಳಿಗೆ ವರ್ಗಾಯಿಸುವಂತೆ ಆದೇಶದಲ್ಲಿ ಹೇಳಿದೆ.

ಹೂಡಿಕೆದಾರರಿಗೆ ವಂಚಿಸಿರುವ ರೂ. 24 ಸಾವಿರ ಕೋಟಿ ಸಹಾರಾ ಗ್ರೂಪ್‍ನ ಎರಡು ಕಂಪನಿಗಳು ಪಾವತಿಸ ಬೇಕೆಂದು ಈ ಹಿಂದೆ ಸೆಬಿ ಆದೇಶಿಸಿತ್ತು. ಆದರೆ ಇದುವರೆಗೂ ಪಾವತಿಸಿಲ್ಲ. ಅಂದಿನಿಂದಲೂ ಕಂಪನಿ ಮತ್ತು ಸೆಬಿ ನಡುವೆ ಸಂಘರ್ಷ ಮುಂದುವರೆದಿದೆ. ಇತ್ತೀಚೆಗೆ ಕಂಪನಿಯ ಹೂಡಿಕೆ ನಿರ್ವಹಣಾ ಪರವಾನಗಿಯನ್ನು ರದ್ದುಪಡಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com