ನವೆಂಬರ್‍ನಲ್ಲಿ ಇನ್ವೆಸ್ಟ್ ಕರ್ನಾಟಕ-2015: ಗುಪ್ತಾ

ಮುಂದಿನ ನವೆಂಬರ್‍ನಲ್ಲಿ ಬೆಂಗಳೂರಿನಲ್ಲಿ `ಇನ್ವೆಸ್ಟ್ ಕರ್ನಾಟಕ-2015' ಆಯೋಜಿಸುವುದರ ಮೂಲಕ ವಿವಿಧ ವಲಯಗಳ ಹೂಡಿಕೆಗೆ ಅವಕಾಶ ನೀಡಲಾಗುವುದು ಎಂದು ಅಭಿವೃದ್ಧಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗೌರವ ಗುಪ್ತಾ ತಿಳಿಸಿದರು...
ಅಭಿವೃದ್ಧಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗೌರವ ಗುಪ್ತಾ (ಸಂಗ್ರಹ ಚಿತ್ರ)
ಅಭಿವೃದ್ಧಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗೌರವ ಗುಪ್ತಾ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಮುಂದಿನ ನವೆಂಬರ್‍ನಲ್ಲಿ ಬೆಂಗಳೂರಿನಲ್ಲಿ `ಇನ್ವೆಸ್ಟ್ ಕರ್ನಾಟಕ-2015' ಆಯೋಜಿಸುವುದರ ಮೂಲಕ ವಿವಿಧ ವಲಯಗಳ ಹೂಡಿಕೆಗೆ ಅವಕಾಶ ನೀಡಲಾಗುವುದು ಎಂದು ಅಭಿವೃದ್ಧಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗೌರವ ಗುಪ್ತಾ ತಿಳಿಸಿದರು.

ವಿಜಯನಗರದ ಕಾಸಿಯಾ ಸಭಾಂಗ ಣದಲ್ಲಿ ಶುಕ್ರವಾರ ಕೈಗಾರಿಕಾ ಕೈಪಿಡಿಯ 7ನೇ ಆವೃತ್ತಿ ಬಿಡುಗಡೆಗೊಳಿಸಿ ಮತ್ತು ಕೈಗಾರಿಕೋದ್ಯಮಿಗಳ ಜತೆಗಿನ ಸಂವಾದ ದಲ್ಲಿ ಮಾತನಾಡಿ, ನವೆಂಬರ್ 23ರಿಂದ 25ರ ವರೆಗೆ ಮೂರು ದಿನಗಳ ಕಾರ್ಯ ಕ್ರಮದಲ್ಲಿ ಪ್ರಪಂಚದ ಹಲವೆಡೆಯ ಹೂಡಿಕೆದಾರಿಗೆ ಹೂಡಿಕೆಗೆ ಆಹ್ವಾನಿಸಲಾಗುವುದು ಎಂದು ಹೇಳಿದರು.

ದೇಶಾದ್ಯಂತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು ಎಂಟು ಕೋಟಿಯಷ್ಟು ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ ಬೃಹತ್ ಕೈಗಾರಿಕೆಗಳಿಗೆ ಹೆಚ್ಚಿನ ಲಾಭ ತರುತ್ತಿವೆ. ಉತ್ಪಾದನಾ ವಲಯದಲ್ಲಿ ಶೇ.45 ಜಿಡಿಪಿ ಹೊಂದಿದೆ ಎಂದು ತಿಳಿಸಿದರು. 5-8 ಸಾವಿರ ಎಕರೆ ಭೂಮಿ: 2014-19ರ ಕೈಗಾರಿಕಾ ಯೋಜನೆಯಲ್ಲಿಮೂಲಸೌಲಭ್ಯ ಒದಗಿಸಲು ಒತ್ತು ನೀಡಲಾಗುವುದು. 5 ಸಾವಿರದಿಂದ 8 ಸಾವಿರ ಎಕರೆ ಭೂಮಿ ಜತೆಗೆ ರಸ್ತೆ, ನೀರು, ವಿದ್ಯುತ್ ಸೌಲಭ್ಯ ಒದಗಿಸಲಾಗುವುದು. ಈಗಾಗಲೇ ಕೆಐಎಡಿಬಿ ಶೇ.20 ಭಾಗದ ಭೂಮಿಯನ್ನು ರಾಜ್ಯದಲ್ಲಿ ಗುರುತಿಸಿದೆ ಎಂದರು.

ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನೆ ವಲಯಕ್ಕೆ 12,500 ಎಕರೆ ಭೂಮಿ ಮಂಜೂರಾಗಿದೆ. ಇದರ ಜೊತೆಗೆ ಕಲಬುರಗಿ, ಧಾರವಾಡ, ಕೋಲಾರಗಳಿಗೆ ವಿಸ್ತರಿಸಲಾಗುವುದು ಮತ್ತು ಹುಬ್ಬಳ್ಳಿ, ಬೆಂಗಳೂರಿನ ಪೀಣ್ಯ ಮತ್ತು ಬೊಮ್ಮನಹಳ್ಳಿಯಲ್ಲಿ ಇಂಡಸ್ಟ್ರೀ ಯಲ್ ಟೌನ್ ಸ್ಥಾಪಿಸಲಾಗುವುದು. ಇಲಾಖೆಯಲ್ಲಿನ ಅಕ್ರಮಗಳನ್ನು
ತಡೆಯಲು ಆನ್‍ಲೈನ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಮೋಸಿನ್ ಹಾಗೂ ಕಾಸಿಯಾ ಅಧ್ಯಕ್ಷ ವಿ.ಕೆ.ದೀಕ್ಷಿತ್ ಮಾತನಾಡಿದರು. ಉಪಾಧ್ಯಕ್ಷ ಎ.ಪದ್ಮನಾಭ ಮಾತನಾಡಿ, ನಗರದಲ್ಲಿನ ಕೈಗಾರಿಕೋದ್ಯಮಿಗಳಿಗೆ ಪ್ರಮುಖವಾಗಿ ನೀರಿನ ಸಮಸ್ಯೆ ಕಾಡು ತ್ತಿದೆ. ಸೂಕ್ಷ್ಮ ಕೈಗಾರಿಕೆಗಳು ಸಹ ದೊಡ್ಡ ಮಟ್ಟದ ಹಣ ನೀಡಿ ನೀರು ಪಡೆಯ ಬೇಕಾಗಿದೆ. ನೀರು ಅಷ್ಟೇ ಅಲ್ಲದೆ ವಿದ್ಯುತ್, ಭೂಮಿ ಸಂಬಂಧಿತ ಸಮಸ್ಯೆಗಳು ಕೈಗಾರಿಕೋದ್ಯಮಿಗಳನ್ನು ಸಂಕಷ್ಟ ದೂಡಿವೆ. ಇದನ್ನು ಗಮನ ಹರಿಸಿ ಇತ್ಯರ್ಥ ಮಾಡುವಂತೆ ಮನವಿ ಮಾಡಿದರು. ತಾವರೆಕೆರೆ ಬಳಿಯ ಗಣಪತಿಪುರ ಹಾಗೂ ದಾಬಸ್‍ಪೇಟೆ ಬಳಿಯಲ್ಲಿಯೂ ಇದೇ ರೀತಿಯ ಸಮಸ್ಯೆಗಳಿವೆ ಎಂದು ಇದೇ ಸಂದರ್ಭದಲ್ಲಿ ಆಯುಕ್ತರ ಗಮನಕ್ಕೆ ತರಲಾಯಿತು. ಇಲಾಖೆ ವತಿಯಿಂದ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸವಾಗಬೇಕು ಎಂದು ಉಪಸ್ಥಿತರಿದ್ದ ಕೈಗಾರಿಕೋದ್ಯಮಿಗಳು ಆಯುಕ್ತರನ್ನು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com