
ನವದೆಹಲಿ: ಕೇಂದ್ರ ಸರ್ಕಾರ ಒಡೆತನದ ದೂರ ಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್ ಜೂನ್ ೧೫ ರಿಂದ ಉಚಿತ ರೋಮಿಂಗ್ ಸೇವೆಗಳನ್ನು ಒದಗಿಸಲಿದೆ ಎಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ತಿಳಿಸಿದ್ದಾರೆ.
"ದೇಶದಾದ್ಯಂತ ಜೂನ್ ೧೫ ರಿಂದ ಬಿಎಸ್ಎನ್ಎಲ್ ರೋಮಿಂಗ್ ಉಚಿತವಾಗಿರುತ್ತದೆ" ಎಂದು ಪ್ರಸಾದ್ ತಿಳಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಬಿಎಸ್ಎನ್ಎಲ್ ಸ್ಥಿರ ದೂರವಾಣಿಯಿಂದ ದೇಶದ ಯಾವುದೇ ಭಾಗಕ್ಕೆ ಮೊಬೈಲ್ ಗಳನ್ನು ಒಳಗೊಂಡಂತೆ ಯಾವುದೇ ಆಪರೇಟರ್ ಆಗಲಿ ರಾತ್ರಿ ೯ ಘಂಟೆಯಿಂದ ಬೆಳಗ್ಗೆ 7 ಘಂಟೆಯವರೆಗೆ ಉಚಿತ ದೂರವಾಣಿ ಕರೆಗಳ ಕೊಡುಗೆಯನ್ನು ಕೂಡ ನೀಡಿತ್ತು. ಇದು ಮೇ 1 ರಿಂದ ಚಾಲ್ತಿಯಲ್ಲಿದೆ.
ಬಹಳಷ್ಟು ನಷ್ಟ ಅನುಭವಿಸುತ್ತಿದ್ದರು ಸ್ಥಿರ ದೂರವಾಣಿ ಮಾರುಕಟ್ಟೆಯಲ್ಲಿ ಬಿಎಸ್ಎನ್ಎಲ್ ೬೨.೨೬% ಮಾರುಕಟ್ಟೆ ಪ್ರಮಾಣವನ್ನು ಹೊಂದಿದೆ.
Advertisement