
ನವದೆಹಲಿ: ನೌಕರರ ಭವಿಷ್ಯ ನಿಧಿಸಂಸ್ಥೆ (ಇಪಿಎಫ್ಒ)ಯು ಭವಿಷ್ಯನಿಧಿ ಅದಾಲತ್ ಹೆಸರನ್ನು ಬದಲಿಸಿ, ಅದಕ್ಕೆ `ನಿಧಿ ಆಪ್ಕೆ ನಿಕತ್' ಎಂದು ಮರುನಾಮಕರಣ ಮಾಡಿದೆ. ಚಂದಾದಾರರ ಸಮಸ್ಯೆ ಗಳನ್ನು ಪರಿಹರಿಸುವ ಭವಿಷ್ಯ ನಿಧಿ ಅದಾಲತ್ ಅನ್ನು ಅವರ ನಿರೀಕ್ಷೆಗೆ ಅನುಗುಣವಾಗಿ ಇನ್ನಷ್ಟು ಜನಸ್ನೇಹಿಯನ್ನಾಗಿಸಲು ಈ ರೀತಿ ಮರುನಾಮಕರಣ ಮಾಡಲಾಗಿದೆ. ಜತೆಗೆ,
ಇದರಲ್ಲಿ ಚಂದಾದಾರರು ಹೆಚ್ಚು ಹೆಚ್ಚು ಭಾಗಿಯಾಗುವಂತೆ, ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ಮಾಡಲಾಗುತ್ತದೆ ಎಂದು ಇಪಿಎಫ್ಒ ತಿಳಿಸಿದೆ.
Advertisement