
ನವದೆಹಲಿ: ಚೆಕ್‍ಬೌನ್ಸ್ ಪ್ರಕರಣದಿಂದ ವಂಚನೆಗೊಳಗಾಗಿರುವ ದೇಶದ 18 ಲಕ್ಷಕ್ಕೂ ಹೆಚ್ಚು ಮಂದಿಗೊಂದು ನೆಮ್ಮದಿಯ ಸುದ್ದಿ.
ನೆಗೋಷಿಯೆಬಲ್ ಇನ್‍ಸ್ಟ್ರುಮೆಂಟ್ಸ್ ಆ್ಯಕ್ಟ್ ಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. ಇದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊರಡಿಸಲಾಗುವ 14ನೇ ಅಧಿಸೂಚನೆಯಾಗಲಿದೆ.
ಪ್ರಸ್ತಾವಿತ ಸುಗ್ರೀವಾಜ್ಞೆಯು ಚೆಕ್ ಕ್ಲಿಯರೆನ್ಸ್ ಅಥವಾ ಪೇಮೆಂಟ್‍ಗಾಗಿ ನೀಡಿದ ಸ್ಥಳದಲ್ಲೇ ಚೆಕ್‍ಬೌನ್ಸ್ ಪ್ರಕರಣ ದಾಖಲಿಸಲು ಅವಕಾಶ ಮಾಡಿಕೊಡುತ್ತದೆ. ಒಬ್ಬ ವ್ಯಕ್ತಿ ವಿರುದ್ಧ ಒಂದಕ್ಕಿಂತ ಹೆಚ್ಚು ಪ್ರಕರಣಗಳಿದ್ದರೆ ಅವೆಲ್ಲವನ್ನು ಒಂದೇ ಸ್ಥಳದಲ್ಲಿ ಒಗ್ಗೂಡಿಸಿ ದಾಖಲಿಸಲೂ ಈ ತಿದ್ದುಪಡಿ ಕಾಯ್ದೆ ಮೂಲಕ ಅವಕಾಶ ಸಿಗಲಿದೆ. ಚೆಕ್ ಎಲ್ಲಿಂದ ಹೊರಡಿಸಲಾಗುತ್ತದೆಯೋ ಅಲ್ಲೇ ಪ್ರಕರಣ ದಾಖಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ನೀಡಿದ ತೀರ್ಪಿನಲ್ಲಿ ಹೇಳಿತ್ತು.
Advertisement