ಋಣಾತ್ಮಕ ವಲಯದಲ್ಲೇ ಮುಂದುವರೆದ ಹಣದುಬ್ಬರ ದರ : ಆದರೆ ಸ್ವಲ್ಪ ಏರಿಕೆ

ಭಾರತದ ಸಗಟು ಹಣದುಬ್ಬರ ದರ ಮೇ ತಿಂಗಳಿನಲ್ಲೂ ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ. ಆದರೆ ಶೇ. (-)2 .36 ರಿಂದ 2 .65 ಕ್ಕೆ ಅಲ್ಪ ಏರಿಕೆಯಾಗಿದೆ.
ಋಣಾತ್ಮಕ ವಲಯದಲ್ಲೇ ಮುಂದುವರೆದ ಹಣದುಬ್ಬರ ದರ : ಆದರೆ ಸ್ವಲ್ಪ ಏರಿಕೆ

ಭಾರತದ ಸಗಟು ಹಣದುಬ್ಬರ ದರ ಮೇ ತಿಂಗಳಿನಲ್ಲೂ ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ.  ಆದರೆ ಶೇ. (-) 2 .65 ರಿಂದ 2 .36 ಕ್ಕೆ ಅಲ್ಪ ಏರಿಕೆಯಾಗಿದೆ.

ಆಹಾರ ಉತ್ಪನ್ನಗಳ ಬೆಲೆ ಏರಿಕೆಯಾಗಿರುವುದರಿಂದ ಹಣಬುಬ್ಬರ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶದಿಂದ ತಿಳಿದುಬಂದಿದೆ.

ಸಗಟು ದರ ಸೂಚ್ಯಂಕ ಆಧರಿಸಿದ ಹಣದುಬ್ಬರ ದರ ಮೇ 2014 ರಲ್ಲಿ ಶೇ.6 .18 ರಷ್ಟು ದಾಖಲೆಯ ಏರಿಕೆ ಕಂಡಿತ್ತು.  2015 ರ ಮೇ ನಲ್ಲಿ ಆಹಾರ ಧಾನ್ಯಗಳ ಬೆಲೆ ಶೇ.3.8 ರಷ್ಟು ಏರಿಕೆಯಾಗಿತ್ತು.  ಈರುಳ್ಳಿ ಹಾಗೂ ಆಲೂಗಡ್ಡೆ ಬೆಲೆ ಶೇ.20.41 ರಷ್ಟು ಏರಿಕೆಯಾಗಿತ್ತು.   

ಮೇ ನಲ್ಲಿ ವಾರ್ಷಿಕ ಇಂಧನ ಹಣದುಬ್ಬರ ದರ ಶೇ.(-) 10 .41 ರಷ್ಟಾಗಿದ್ದರೆ ತಯಾರಿಸಲ್ಪಟ್ಟ ಉತ್ಪನ್ನಗಳ ಹಣದುಬ್ಬರ (-) 0.64 ರಷ್ಟಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ  ಮಾಡಿರುವ ವರದಿಯಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com