
ನವದೆಹಲಿ: ಮೂರು ಪುಟಗಳ ಸರಳೀಕೃತ ಅರ್ಜಿ ಸೇರಿದಂತೆ ಐಟಿಆರ್ ಅರ್ಜಿಗಳ ಹೊಸ ಸೆಟ್ ಅನ್ನು ಮಂಗಳವಾರ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ. ಸೋಮವಾರವಷ್ಟೇ ವಿತ್ತ ಸಚಿವಾಲಯವು ಈ ಬಗೆಗಿನ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು.
ಈ ಬಾರಿ ತೆರಿಗೆ ವಿವರ ಸಲ್ಲಿಸಲು ಆ.31ರವರೆಗೆ ಕಾಲಾವಕಾಶ ನೀಡಲಾಗಿದೆ. ಇದೇ ವೇಳೆ,
ತೆರಿಗೆದಾರರಿಗೆ ನೆರವಾಗುವಂತೆ ಐಟಿ ಇಲಾಖೆಯು ಹೊಸ ಯೋಜನೆ ಆರಂಭಿಸಿದೆ. ಅದರಂತೆ, ಇನ್ನು ಮುಂದೆ ತೆರಿಗೆ ಮರುಪಾವತಿಯ ಮೊತ್ತವು ನೇರವಾಗಿ ತೆರಿಗೆದಾರನ ಬ್ಯಾಂಕ್ ಖಾತೆಯಲ್ಲಿ ಜಮೆ ಆಗಲಿದೆ.
ಏತನ್ಮಧ್ಯೆ, ರು.50 ಸಾವಿರ ಮೌಲ್ಯದ ಐಟಿ ರೀಫಂಡ್ ಅನ್ನು ಚೆಕ್ ರೂಪದಲ್ಲಿ ಅಂಚೆ ಇಲಾಖೆ ಮೂಲಕ ಕಳುಹಿಸುವ ಪದ್ಧತಿಗೆ ಅಂತ್ಯಹಾಡಿ, ಅದನ್ನೂ ಬ್ಯಾಂಕ್ ಮೂಲಕ ಕಳುಹಿಸುವ ವ್ಯವಸ್ಥೆ ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ.
Advertisement