
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಆನ್‍ಲೈನ್ ಮೂಲಕ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಲು ಸಿದ್ದರಾಗಿರುವ ತೆರಿಗೆದಾರರು ಇನ್ನಷ್ಟು ದಿನ ಕಾಯಬೇಕಾಗಿದೆ. ಹೊಸದಾಗಿ ಅಧಿಸೂಚನೆ ಹೊರಡಿಸಿರುವ ಐಟಿಆರ್-2 ಮತ್ತು ಐಟಿಆರ್-2ಎ ನಮೂನೆಗಳನ್ನು ತನ್ನ ಅಧಿಕೃತ ವೆಬ್ ಸೈಟ್‍ನಲ್ಲಿ ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿ ತೆರಿಗೆ ಇಲಾಖೆ ನಿರತವಾಗಿದೆ.
ಇತರೆ ಎರಡು ನಮೂನೆಗಳಾದ ಐಟಿಆರ್-1 ಮತ್ತು ಐಟಿಆರ್ -4ಎಸ್ ಈಗಾಗಲೆ ಸಿದ್ಧವಾಗಿದ್ದು ಇ-ಫೈಲಿಂಗ್ ವೆಬ್‍ಸೈಟ್ http://incometaxindiaefiling.gov.in ನಲ್ಲಿ ಸಲ್ಲಿಸಬಹುದಾಗಿದೆ.
ಈ ವೆಬ್‍ಸೈಟ್ ಬಳಕೆ ಮಾಡಲು ಅಗತ್ಯವಾದ ಲಿಂಕ್‍ಗಳನ್ನು ಶೀಘ್ರದಲ್ಲಿ ಕಲ್ಪಿಸಲಾಗುವುದು.
ಸರಳಗೊ ಳಿಸಿದ ಮೂರು ಪುಟ ಸೇರಿದಂತೆ ಹೊಸ ಐಟಿಆರ್ ನಮೂನೆಗಳನ್ನು ಈ ವಾರದ
ಆರಂಭದಲ್ಲಿ ಬಿಡುಗಡೆ ಮಾಡಲಾ ಯಿತು. ಐಟಿಆರ್ ಇ-ಫೈಲಿಂಗ್‍ಗೆ ಆಗಸ್ಟ್ 31ರವರೆಗೆ ಅವಕಾಶ ನೀಡಲಾಗುವುದು.
Advertisement