ಹಿರಿಯ ನಾಗರಿಕರ ಮನೆಗಳತ್ತ ರಿಯಲ್ ಎಸ್ಟೇಟ್ ಚಿತ್ತ

ಇಂದು ನಗರಗಳಲ್ಲಿ ಹಿರಿಯ ನಾಗರಿಕರ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಇಂದು ನಗರಗಳಲ್ಲಿ ಹಿರಿಯ ನಾಗರಿಕರ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಿರಿಯ ನಾಗರಿಕರು ಮಕ್ಕಳನ್ನು ಅವಲಂಬಿಸದೆ ತಮ್ಮಷ್ಟಕ್ಕೆ ಜೀವನ ಸಾಗಿಸಲು ನೋಡುತ್ತಾರೆ. ಈ ಸಂದರ್ಭವನ್ನು  ಬಳಸಿಕೊಳ್ಳಲು ಯತ್ನಿಸುತ್ತಿರುವ ರಿಯಲ್ ಎಸ್ಟೇಟ್ ಕಂಪೆನಿಗಳು ಅವರಿಗೆ ಅನುಕೂಲವಾಗುವ ರೀತಿಯ ಮನೆಗಳನ್ನು ನಗರಗಳಲ್ಲಿ ಕಟ್ಟುತ್ತಿವೆ.

ಟಾಟಾ ಹೌಸಿಂಗ್, ಪರಾಂಜಪೆ ಸ್ಕೀಮ್ಸ್, ಅದಾನಿ ರಿಯಾಲ್ಟಿ, ಸಿಲ್ವರ್ ಗ್ಲೇಡ್ಸ್, ಬ್ರಿಗೇಡ್ ಮೊದಲಾದ ರಿಯಲ್ ಎಸ್ಟೇಟ್ ಕಂಪೆನಿಗಳು ಹಿರಿಯ ನಾಗರಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಮನೆಗಳನ್ನು ಕಟ್ಟಿಕೊಡುತ್ತಿವೆ. ಸಿಟಿಯಿಂದ ಸ್ವಲ್ಪ ದೂರದಲ್ಲಿ ಶಾಂತ ವಾತಾವರಣವಿರುವ ಪ್ರದೇಶಗಳಲ್ಲಿ ಅಪಾರ್ಟ್ ಮೆಂಟ್ ಗಳನ್ನು ನಿರ್ಮಿಸುತ್ತವೆ.

ನಮ್ಮ ದೇಶದಲ್ಲಿ ಪ್ರಸ್ತುತ ಸುಮಾರು 100 ಮಿಲಿಯನ್ ನಷ್ಟು ಹಿರಿಯ ನಾಗರಿಕರಿದ್ದು, 2030ರ ವೇಳೆಗೆ ಅವರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಯಿದೆ. ಇಂದು ಹಿರಿಯ ನಾಗರಿಕರು ನಗರಗಳಲ್ಲಿ ಅವರದೇ ರೀತಿಯಲ್ಲಿ ಸ್ವತಂತ್ರವಾಗಿ ಬದುಕು ನಡೆಸಲು ಇಷ್ಟಪಡುತ್ತಾರೆ.

ಹಾಗಾಗಿ ರಿಯಲ್ ಎಸ್ಟೇಟ್ ಕಂಪೆನಿಗಳು ಅದರತ್ತ ಮುಖಮಾಡಿವೆ. ಟೌನ್ ಷಿಪ್ ಮತ್ತು ಅಪಾರ್ಟ್ ಮೆಂಟ್  ಮಾದರಿಯಲ್ಲಿ ಹಿರಿಯ ನಾಗರಿಕರ ಅಪಾರ್ಟ್್ಮೆಂಟ್ ಗಳನ್ನು ನಿರ್ಮಸುತ್ತಿವೆ ಎನ್ನುತ್ತಾರೆ ಬಿಲ್ಡರ್ ಗಳ ಜೊತೆ ಕೆಲಸ ಮಾಡುವ ಏಜ್ ವೆಂಚರ್ಸ್ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರುಣ್ ಗುಪ್ತಾ.

ಮನೆಗಳು ಹೇಗಿರುತ್ತವೆ?: ಹಿರಿಯ ನಾಗರಿಕರಿಗಾಗಿ ಕಟ್ಟುವ ಮನೆಗಳಲ್ಲಿ ಸಾಮಾನ್ಯವಾಗಿ ಒಂದು ಅಥವಾ ಎರಡು ಬೆಡ್ ರೂಂಗಳಿರುತ್ತವೆ. ಅಗಲವಾದ ಬಾಗಿಲುಗಳು ಮತ್ತು ದೊಡ್ಡ ಸ್ನಾನಗೃಹಗಳನ್ನು ಹೊಂದಿರುತ್ತವೆ. ಮನೆಯಲ್ಲಿ ಸ್ವಿಚ್ ಗಳು ತುಂಬಾ ತಗ್ಗಿನಲ್ಲಿ ಇಡದೆ ಸ್ವಲ್ಪ ಎತ್ತರದಲ್ಲಿ ಅಳವಡಿಸಲಾಗುತ್ತದೆ. ಹಿರಿಯ ನಾಗರಿಕರಿಗೆ ಬೇಕಾದ ವೈದ್ಯರ ಸೌಲಭ್ಯ, ನರ್ಸ್ ಗಳು, ಕಾಮನ್ ಡೈನಿಂಗ್ ಹಾಲ್, ದಿನನಿತ್ಯದ ಬದುಕಿಗೆ ಏನೆಲ್ಲ ಬೇಕೋ ಅವುಗಳು ಕಾಂಪ್ಲೆಕ್ಸ್ ಒಳಗಡೆಯೇ ಸಿಗಲು ಕಂಪೆನಿಗಳು ಸೌಕರ್ಯ ಒದಗಿಸಿಕೊಡುತ್ತವೆ.
 
ಇದುವರೆಗೆ ವೃದ್ಧರಿಗೆ ವಾಸಕ್ಕೆ ಅನಾಥಾಶ್ರಮಗಳೋ ಇಲ್ಲವೇ ಚಾರಿಟಿ ಮನೆಗಳು ಸಿಗುತ್ತಿದ್ದವು. ಆದರೆ ಇನ್ನು ಮುಂದೆ ಹಣ ಇರುವವರು ಸ್ವಂತ ಮನೆ ಖರೀದಿಸಿ ಇರಬಹುದು. ''ಇಂದು ಮಕ್ಕಳು ವಿದ್ಯಾಭ್ಯಾಸ ಮುಗಿಸಿ ವಿದೇ ಶಗಳಿಗೆ ಹೋಗಿ ನೆಲೆಸುತ್ತಾರೆ. ಇಂತವರ ಪೋಷಕರು 40-45ನೇ ವರ್ಷದಲ್ಲಿ ಭ ವಿಷ್ಯಕ್ಕೆಂದು ಇಂತಹ ಮನೆಗಳನ್ನು ಖರೀದಿಸುತ್ತಾರೆ ಎನ್ನುತ್ತಾರೆ ಬೆಂಗಳೂರು ಮೂಲದ ಬ್ರಿಗೇಡ್ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಓಂ ಅಹುಜಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com