ಐಟಿ ಅಕ್ನಾಲೆಡ್ಜ್‍ಮೆಂಟ್ ಅಪ್‍ಲೋಡ್‍ಗೆ ಬರಲಿದೆ ಒನ್ ಟೈಮ್ ಪಾಸ್‍ವರ್ಡ್

ಪ್ರಸಕ್ತ ಸಾಲಿನಲ್ಲಿ ಐಟಿ ರಿಟನ್ರ್ಸ್ ಸಲ್ಲಿಕೆ ಮಾಡಿದ ಬಳಿಕ ಅಕ್ನಾಲೆಡ್ಜ್‍ಮೆಂಟ್ (ಸ್ವೀಕೃತಿ) ಅನ್ನು ಕಳುಹಿಸುವುದಕ್ಕೆ ಇಲಾಖೆ ಹೊಸ ಉಪಾಯ ಕಂಡುಕೊಂಡಿದೆ...
ಐಟಿ ರಿಟರ್ನ್
ಐಟಿ ರಿಟರ್ನ್

ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಐಟಿ ರಿಟನ್ರ್ಸ್ ಸಲ್ಲಿಕೆ ಮಾಡಿದ ಬಳಿಕ ಅಕ್ನಾಲೆಡ್ಜ್‍ಮೆಂಟ್ (ಸ್ವೀಕೃತಿ) ಅನ್ನು ಕಳುಹಿಸುವುದಕ್ಕೆ ಇಲಾಖೆ ಹೊಸ ಉಪಾಯ ಕಂಡುಕೊಂಡಿದೆ.

ಇ-ಫೈಲಿಂಗ್ ಮಾಡಿದ ಬಳಿಕ ಅಕ್ನಾಲೆಡ್ಜ್‍ಮೆಂಟ್ ರವಾನೆ ಮಾಡಲು ತೆರಿಗೆದಾರಿಗೆ 24 ಗಂಟೆಗಳ ಅವಧಿಯ ಒನ್ ಟೈಮ್ ಪಾಸ್‍ವರ್ಡ್ ಅನ್ನು ಇಲಾಖೆ ನೀಡಲಿದೆ. ಆಧಾರ್ ಡೇಟಾಬೇಸ್‍ನಿಂದ ಪರಿಶೀಲನೆಗೆ ಒಳಗಾದ ಬಳಿಕ ತೆರಿಗೆದಾರನ ಮೊಬೈಲ್‍ಗೆ ಈ ಪಾಸ್ವರ್ಡ್ ಅನ್ನು ಕಳುಹಿಸಲಾಗುತ್ತದೆ.

ತೆರಿಗೆ ಪಾವತಿದಾರನ ಆಧಾರ ಸಂಖ್ಯೆ, ಪ್ಯಾನ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದ ಬಳಿಕ ಒಂದು ಬಾರಿ ಬಳಕೆ ಮಾಡುವ ಪಾಸ್ ವರ್ಡ್ ಅನ್ನು ಕಳುಹಿಸಲಾಗುತ್ತದೆ. ಅದನ್ನು ರಿಟರ್ನ್ ಅನ್ನು ಅಪ್ ಲೋಡ್ ಮಾಡುವ ವೇಳೆ ಬಳಸಿಕೊಳ್ಳಬೇಕು. ಒಂದು ವೇಳೆ 24 ಗಂಟೆಯ
ಒಳಗಾಗಿ ಪಾಸ್‍ವರ್ಡ್ ಅನ್ನು ಬಳಕೆ ಮಾಡಲು ವಿಫಲರಾದರೆ 2ನೇ ಬಾರಿಗೆ ಪಾಸ್‍ವರ್ಡ್ ಅನ್ನು ಕಳುಹಿಸುವ ಬಗ್ಗೆಯೂ ಆದಾಯ ತೆರಿಗೆ ಇಲಾಖೆ ಚಿಂತಿಸುತ್ತಿದೆ. ಈ ಮೂಲಕ ಅಂಚೆ ಮೂಲಕ ಅಕ್ನಾಲೆಡ್ಜ್ ಮೆಂಟ್ ಅನ್ನು ಕಳುಹಿಸುವ ಸಮಸ್ಯೆ ತಪ್ಪಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com