
ಚೆನ್ನೈ/ಮುಂಬೈ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‍ಗೆ ಸನ್ ನೆಟ್‍ವರ್ಕ್‍ನ ಷೇರುಗಳನ್ನು ಮಾರಾಟ ಮಾಡುವುದಿಲ್ಲ. ಈ ಬಗ್ಗೆ ಚಾಲ್ತಿಯಲ್ಲಿರುವ
ಮಾಹಿತಿ ಸತ್ಯವಲ್ಲ ಎಂದು ಸನ್ ಗ್ರೂಪ್‍ನ ಮುಖ್ಯ ಹಣಕಾಸು ಅಧಿಕಾರಿ ಎಸ್.ಎಲ್ .ನಾರಾಯಣ್ ತಿಳಿಸಿದ್ದಾರೆ. ಷೇರು ಮಾರಾಟದ ಬಗೆಗಿನ ವರದಿ ದೇಶದ ವಾಣಿಜ್ಯ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿತು. ಸ್ಪೆಕ್ಟ್ರಂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಡಿಎಂಕೆ ನಾಯಕರ ಕುಟುಂಬಕ್ಕೆ ಈ ಮಾಹಿತಿ ಆಘಾತ ತಂದಿಟ್ಟಿತು. ಸುದ್ದಿ ಎಲ್ಲಿಯ ವರಗೆ ಹೋಯಿತೆಂದರೆ ಬಾಂಬೆ ಷೇರು ಪೇಟೆ ಕೂಡ ಸನ್ ಗ್ರೂಪ್‍ನಿಂದ ಸ್ಪಷ್ಟನೆ ಬಯಸಿತು. ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರೀಸ್ ನೆಟ್ ವರ್ಕ್ 18 ಅನ್ನು ಖರೀದಿಸಿತ್ತು.
Advertisement