ಚಿನ್ನದ ಬೆಲೆ ಅಗ್ಗ: 10 ಗ್ರಾಂಗೆ 410 ರುಪಾಯಿ ಇಳಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮ ಚಿನ್ನದ ಬೆಲೆ ಕಡಿಮೆಯಾಗಿದೆ. ಚಿನ್ನ 10 ಗ್ರಾಂಗಳಿಗೆ ರು. 410 ಇಳಿಕೆಯಾಗಿದ್ದು ರೂ 26,690ಕ್ಕೆ ಜಿಗಿದಿದೆ.
ಚಿನ್ನ
ಚಿನ್ನ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮ ಚಿನ್ನದ ಬೆಲೆ ಕಡಿಮೆಯಾಗಿದೆ. ಚಿನ್ನ 10 ಗ್ರಾಂಗಳಿಗೆ ರು. 410 ಇಳಿಕೆಯಾಗಿದ್ದು ರೂ 26,690ಕ್ಕೆ ಜಿಗಿದಿದೆ.

ಇದೇ ವೇಳೆ, ಬೆಳ್ಳಿ ಬೆಲೆಯಲ್ಲೂ ಬಾರಿ ಇಳಿಕೆಯಾಗಿದ್ದು, ಪ್ರತಿ ಕೆಜಿಗೆ ರು. 550 ಕುಸಿದಿದೆ. ಇದರೊಂದಿಗೆ ಬೆಳ್ಳಿ ಬೆಲೆ 38,000ಕ್ಕೆ ಇಳಿದಿದೆ.

ಅಮೆರಿಕದ ಫೆಡರಲ್‌ ಬ್ಯಾಂಕ್‌ ಈ ವರ್ಷಾಂತ್ಯಕ್ಕೆ ಬಡ್ಡಿ ದರ ಏರಿಕೆ ಮಾಡುವ ಸೂಚನೆ ನೀಡಿದ್ದು, ಇದರಿಂದ ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಮೂಡಿದೆ.

ಇದರ ಜತೆಗೆ ಚಿನ್ನದ ಬೇಡಿಕೆ ತಗ್ಗಿದೆ. ಈ ಎಲ್ಲ ಕಾರಣಗಳಿಂದ ಬೆಲೆಯಲ್ಲಿ ದಿಢೀರ್‌ ಇಳಿಕೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com