ಬ್ಯಾಂಕ್ ಸಿಬ್ಬಂದಿಯ ವೇತನ ಶೇ.15 ಹೆಚ್ಚಳಕ್ಕೆ ನಿರ್ಧಾರ
ಮುಂಬೈ: ಸುದೀರ್ಘ ಸಮಾಲೋಚನೆಯ ಬಳಿಕ ರಾಜ್ಯ ಸರ್ಕಾರ ಸ್ವಾಮ್ಯದ ಬ್ಯಾಂಕುಗಳು ಸೇರಿ ಒಟ್ಟು 43 ಬ್ಯಾಂಕುಗಳ 10 ಲಕ್ಷ ಸಿಬ್ಬಂದಿಗೆ ಶೇ.15 ಏರಿಸಲು ನಿರ್ಧರಿಸಲಾಗಿದೆ. ಜತೆಗೆ ಮುಂದಿನ ಜುಲೈನಿಂದ ಪ್ರತಿ 2ನೇ ಹಾಗೂ 4ನೇ ಶನಿವಾರ ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿದೆ.
ಭಾರತೀಯ ಬ್ಯಾಂಕ್ ಅಸೋಸಿಯೇಷನ್(ಐಬಿಎ)ಸೋಮವಾರ ಒಕ್ಕೂಟಗಳು ಹಾಗೂ ಅಧಿಕಾರಿಗಳ ಅಸೋಸಿಯೇಷನ್ ಜತೆ ಈ ಒಪ್ಪಂದಕ್ಕೆ ಸಹಿ ಹಾಕಿದೆ.
ಇದರಿಂದ ಸಾಲಗಾರರ ಮೇಲೆ ರು.8,370 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ವೇತನ ಪರಿಷ್ಕರಣೆಯು 2012ರ ನ.1 ರಿಂದ ಅನ್ವಯಿಸಲಿದೆ. ಸಾರ್ವಜನಿಕ ವಲಯ ಬ್ಯಾಂಕುಗಳು, ಹಳೆಯ ಖಾಸಗಿ ವಲಯ ಬ್ಯಾಂಕುಗಳು ಮತ್ತು ಕೆಲವು ವಿದೇಶಿ ಬ್ಯಾಂಕುಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ಫಲಾನುಭವಿಗಳಾಗಲಿದ್ದಾರೆ. ವೇತನ ದಲ್ಲಿ ಶೇ.15ರಷ್ಟು ಹೆಚ್ಚಳವು ಬ್ಯಾಂಕುಗಳ ಮೇಲೆ ರು.4,725 ಕೋಟಿ ಹೊರೆ ಬೀರಲಿದೆ ಎಂದು ಐಬಿಎ ಅಧ್ಯಕ್ಷ ಟಿ.ಎಮ್. ಭಾಸಿನ್ ತಿಳಿಸಿದ್ದಾರೆ.
ಕೆಲಸಗಾರರು ಹಾಗೂ ಅಧೀನದಲ್ಲಿರದಿರುವ ಸಿಬ್ಬಂದಿಯ ವೇತನವನ್ನು ರು.7,200- ರು.19,300 ರಿಂದ ರು.11,765- ರು31,540ಗೆ ಪರಿಷ್ಕರಿಸಲಾಗಿದೆ. ಅಧೀನದಲ್ಲಿ ರದಿರುವ ಸಿಬ್ಬಂದಿಯ ವೇತನವನ್ನು ರು.5,850- -ರು.11,350ಯಿಂದ ರು.9,560-ರು.18,545ಗೆ ಪರಿಷ್ಕರಿಸಲಾಗಿದೆ. ಒಪ್ಪಂದದ ಪ್ರಮುಖ ಅಂಶವೆಂದರೆ ಸಿಬ್ಬಂದಿಯ ಕುಟುಂಬದವರಿಗೆ ವೈದ್ಯಕೀಯ ವಿಮಾ ಯೋಜನೆ ಆರಂಭಿಸಿರುವುದು. ನೂತನ ಪಾಲಿಸಿಯಲ್ಲಿ ರು.3ರಿಂದ ರು.4 ಲಕ್ಷದವರೆಗೆ ವಿಮೆ ನೀಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ