ಕಲ್ಲಿದ್ದಲು ಉತ್ಪಾದನೆ ನಿಗದಿತ ಗುರಿ ತಲುಪಲು ಕೋಲ್ ಇಂಡಿಯಾ ವಿಫಲ

ಸರ್ಕಾರಿ ಸ್ವಾಮ್ಯದ ಗಣಿಕಾರಿಕಾ ಸಂಸ್ಥೆ ಕೋಲ್ ಇಂಡಿಯಾ ಅಕ್ಟೋಬರ್ ನಲ್ಲಿ ಖರೀದಿಯ ಗುರಿಯನ್ನು ಸಾಧಿಸಿದ್ದರೂ, ತಾತ್ಕಾಲಿಕ ಕಲ್ಲಿದ್ದಲು ಉತ್ಪಾದನೆಯಲ್ಲಿ ಗುರಿ ತಲುಪಿಲ್ಲ.
ಕೋಲ್ ಇಂಡಿಯಾ
ಕೋಲ್ ಇಂಡಿಯಾ

ಕೋಲ್ಕತ್ತ: ಸರ್ಕಾರಿ ಸ್ವಾಮ್ಯದ ಗಣಿಕಾರಿಕಾ ಸಂಸ್ಥೆ ಕೋಲ್ ಇಂಡಿಯಾ ಅಕ್ಟೋಬರ್ ನಲ್ಲಿ ಖರೀದಿಯ ಗುರಿಯನ್ನು ಸಾಧಿಸಿದ್ದರೂ, ತಾತ್ಕಾಲಿಕ ಕಲ್ಲಿದ್ದಲು ಉತ್ಪಾದನೆಯಲ್ಲಿ ಗುರಿ ತಲುಪಿಲ್ಲ. ನಿಗದಿತ ಗುರಿಗಿಂತ ಶೇ.5 ಕಡಿಮೆ ಪ್ರಗತಿ ಸಾಧಿಸಿದೆ.
ಕಳೆದ ತಿಂಗಳು 46 .84 ಮಿಲಿಯನ್  ಟನ್ ಕಲ್ಲಿದ್ದಲು ಉತ್ಪಾದನೆಯ ಗುರಿ ಹೊಂದಲಾಗಿತ್ತು. ಆದರೆ 44 .37 ಮಿಲಿಯನ್ ಕಲ್ಲಿದ್ದಲು ಉತ್ಪಾದನೆಯಾಗಿದೆ. ಇನ್ನು ಕಲ್ಲಿದ್ದಲು ಖರೀದಿ ಗುರಿ 44 .31 ಮಿಲಿಯನ್ ಟನ್ ಗಳಷ್ಟಿತ್ತಾದರೂ, ಗುರಿಯನ್ನು ಮೀರಿ 44 .41 ಮಿಲಿಯನ್ ಟನ್ ಗಳಷ್ಟು ಖರೀದಿಸಲಾಗಿದೆ ಎಂದು ಕೋಲ್ ಇಂಡಿಯಾ ತಿಳಿಸಿದೆ.
ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಯಾಗಿರುವ ಮಹಾನದಿ ಕೋಲ್ ಫೀಲ್ಡ್ಸ್(ಎಂಸಿಎಲ್) ನಿಗದಿತ ಗುರಿಗಿಂತ ಶೇ.16 ಕಡಿಮೆ ಪ್ರಗತಿ ಸಾಧಿಸಿದ್ದಾರೆ, ಸೌತ್ ಈಸ್ಟ್ರನ್ ಕೋಲ್ ಫೀಲ್ಡ್ಸ್11.67 ಮಿಲಿಯನ್ ಟನ್ ಗಳ ಗುರಿಯನ್ನು ತಲುಪಿದೆ. ಎಂಸಿಎಲ್  ನ ಆಫ್ ಟೇಕ್(ಖರೀದಿಯ ಗುರಿ) ಶೇ.3 ರಷ್ಟು ಕಡಿಮೆ ಇದ್ದರೆ ಸೌತ್ ಈಸ್ಟ್ರನ್ ಕೋಲ್ ಫೀಲ್ಡ್ಸ್ ಶೇ.8 ರಷ್ಟು ಗುರಿಯನ್ನು ದಾಟಿದೆ ಎಂದು ಕೋಲ್ ಇಂಡಿಯಾ ತಿಳಿಸಿದೆ.
ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಕಲ್ಲಿದ್ದಲು ಉತ್ಪಾದನೆ ಹಾಗೂ ಆಫ್ ಟೇಕ್ ನ ನಿಗದಿತ ಗುರಿಯನ್ನು ಶೇ.97 ರಷ್ಟು ಮಾತ್ರ ತಲುಪಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com