ಅಕ್ಟೋಬರ್ ತಿಂಗಳ ಸಗಟು ಹಣದುಬ್ಬರ ಶೇ.-3.81 ಕ್ಕೆ ಇಳಿಕೆ

ಸಗಟು ಬೆಲೆ ಸೂಚ್ಯಂಕ ಆಧಾರಿತ ಭಾರತದ ಹಣದುಬ್ಬರ ದರ ಅಕ್ಟೋಬರ್ ತಿಂಗಳಲ್ಲಿ (-)4 .54 ರಿಂದ (-) 3 .81 ಕ್ಕೆ ಕುಸಿದಿದೆ.
ಅಕ್ಟೋಬರ್ ತಿಂಗಳ ಸಗಟು ಹಣದುಬ್ಬರ ಶೇ.-3,81 ಕ್ಕೆ ಇಳಿಕೆ
ಅಕ್ಟೋಬರ್ ತಿಂಗಳ ಸಗಟು ಹಣದುಬ್ಬರ ಶೇ.-3,81 ಕ್ಕೆ ಇಳಿಕೆ

ನವದೆಹಲಿ: ಸಗಟು ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ (-)4 .54 ರಿಂದ (-) 3 .81 ಕ್ಕೆ ಇಳಿಕೆಯಾಗಿದೆ.
ಕಳೆದ ವರ್ಷದಲ್ಲಿ ಈರುಳ್ಳಿ, ದ್ವಿದಳ ಧಾನ್ಯಗಳ ಬೆಲೆಯಲ್ಲಿ ಶೇ. 86 ರಷ್ಟು ಏರಿಳಿತ ಉಂಟಾಗಿದ್ದರಿಂದ ಕಳೆದ ತಿಂಗಳಲ್ಲಿ (-) 4 .54 ರಷ್ಟಿದ್ದ ಹಣದುಬ್ಬರ ಅಕ್ಟೊಬರ್ ಗೆ (-)3 .81 ರಷ್ಟಾಗಿದೆ ಎಂದು ವಿಶ್ಲೇಷಿಸಲಾಗಿದೆ.
ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಪರಿಶೀಲನೆಯಲ್ಲಿರುವ ಪ್ರಸಕ್ತ ತಿಂಗಳಲ್ಲಿ ಪ್ರಮುಖ ವಸ್ತುಗಳ ಸೂಚ್ಯಂಕ ಶೇ.೦.36 ರಷ್ಟು ಹಾಗೂ ಉತ್ಪಾದಿತ ಉತ್ಪನ್ನಗಳ ಸೂಚ್ಯಂಕ ಶೇ.1 .67 ಕ್ಕೆ ಇಳಿಕೆಯಾಗಿದೆ.
ಆಹಾರ ವಸ್ತುಗಳಿಗೆ ಸಂಬಂಧಿಸಿದ ಉಪ ವರ್ಗದ ಸೂಚ್ಯಂಕ ಪ್ರಸಕ್ತ ವರ್ಷದಲ್ಲಿ ಶೇ.2 .44 ರಷ್ಟು ಏರಿಕೆಯಾಗಿತ್ತು. ಕಳೆದ ತಿಂಗಳೊಂದರಲ್ಲೇ ಬೆಳೆ ಕಾಳುಗಳ ದರ ಶೇ.17 ರಷ್ಟು ಹೆಚ್ಚಾಗಿತ್ತು. ಹಣದುಬ್ಬರ ದರದ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಥಿಕ ತಜ್ಞರು ಆರು ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದರ ಧನಾತ್ಮಕ ವಲಯದಲ್ಲಿ ಇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ಕಳೆದ ವಾರ ಸರ್ಕಾರ ಬಿಡುಗಡೆ ಮಾಡಿದ್ದ ಅಂಕಿ-ಅಂಶಗಳ ಪ್ರಕಾರ, ಸತತ ಮೂರನೇ ತಿಂಗಳಲ್ಲೂ ಏರಿಕೆಯಾಗಿದ್ದ ಗ್ರಾಹಕ ಬೆಲೆ ಹಣದುಬ್ಬರ ಅಕ್ಟೋಬರ್ ನಲ್ಲಿ ಶೇ.5 ರಷ್ಟಿತ್ತು. ಪ್ರಸ್ತುತ ಬಿಡುಗಡೆಯಾಗಿರುವ ಅಂಕಿ-ಅಂಶಗಳು ಡಿಸೆಂಬರ್ ನಲ್ಲಿ ನಡೆಯಲಿರುವ ಆರ್.ಬಿ.ಐ ನ ನೀತಿ ಪರಾಮರ್ಶೆ ಮೇಲೆ ಪರಿಣಾಮ ಬೀರಲಿದ್ದು ಗ್ರಾಹಕ ಬೆಲೆ ಹಣದುಬ್ಬರ ಸತತ 4 ನೇ ತಿಂಗಳಲ್ಲೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಡಿಸೆಂಬರ್ ನ  ನೀತಿ ಪರಾಮರ್ಶೆ ಸಭೆಯಲ್ಲಿ ಆರ್.ಬಿ.ಐ ನೀತಿಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com