ಶೀಘ್ರ ಬರಲಿದೆ ಸಾಮಾನ್ಯ ಐಟಿ ರಿಟರ್ನ್ ಫಾರಂ

ಐಟಿ ತೆರಿಗೆ ರಿಟರ್ನ್‍ನ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ, ಅರ್ಜಿ ಸರಳೀಕರಣಕ್ಕೆ ಸರ್ಕಾರ ಚಿಂತನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಐಟಿ ತೆರಿಗೆ ರಿಟರ್ನ್‍ನ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ, ಅರ್ಜಿ ಸರಳೀಕರಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ತಜ್ಞರ ಸಹಾಯವಿಲ್ಲದೆ ಶ್ರೀಸಾಮಾನ್ಯರು ತಾವೇ ಅದನ್ನು ತುಂಬುವಂತೆ ಅರ್ಜಿಯನ್ನು ರೂಪಿಸುವಂತೆ ಮಾಡಲು ಸಮಿತಿಯೊಂದನ್ನು ಆದಾಯ ಇಲಾಖೆ ರಚಿಸಲಿದೆ. 
ಜಂಟಿ ಕಾರ್ಯದರ್ಶಿಯೊಬ್ಬರು ಈ ಸಮಿತಿಯ ಮುಖ್ಯಸ್ಥರಾಗಲಿದ್ದು, ಲೆಕ್ಕಪರಿಶೋಧಕರು ಮತ್ತು ತೆರಿಗೆ ತಜ್ಞರು ಸದಸ್ಯರಾಗಿರಲಿದ್ದಾರೆ. ಸ್ವಯಂ ತಾವೇ ಅರ್ಜಿ ಸಲ್ಲಿಸಬಯಸುವ ಶ್ರೀಸಾಮಾನ್ಯರಿಗೆ ಅನುಕೂಲವಾಗುವಂತೆ ಅರ್ಜಿಯನ್ನು ರೂಪಿಸಬೇಕಿದೆ. ಫಾಮರ್ïನಲ್ಲಿ ಪುಟಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com