ಮೋದಿಯವರ ಚಿನ್ನ ನಗದೀಕರಣ ಯೋಜನೆಯಲ್ಲಿ ಅತೀ ಹೆಚ್ಚು ಠೇವಣಿ ಮಾಡಿಲಿದೆಯೇ ತಿರುಪತಿ ದೇಗುಲ?

ಮೂರು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಚಿನ್ನ ನಗದೀಕರಣ ಯೋಜನೆ (ಜಿಎಂಎಸ್) ಯಲ್ಲಿ ಅತೀ ಹೆಚ್ಚು ಚಿನ್ನ ಠೇವಣಿ...
ತಿರುಪತಿ ಬಾಲಾಜಿ ದೇವಾಲಯ
ತಿರುಪತಿ ಬಾಲಾಜಿ ದೇವಾಲಯ
ನವದೆಹಲಿ: ಮೂರು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು  ಚಾಲನೆ ನೀಡಿದ್ದ  ಚಿನ್ನ ನಗದೀಕರಣ ಯೋಜನೆ (ಜಿಎಂಎಸ್) ಯಲ್ಲಿ ತಿರುಪತಿ ಬಾಲಾಜಿ ದೇವಾಲಯ ಅತೀ ಹೆಚ್ಚು ಚಿನ್ನ ಠೇವಣಿ ಮಾಡಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಜಿಎಂಎಸ್ ನಲ್ಲಿ ತಾವು ದೇಗುಲದ ಚಿನ್ನವನ್ನು ಠೇವಣಿ ಮಾಡಲು ಇಷ್ಟ ಪಡುತ್ತೇವೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಈ ಹಿಂದೆ ಹೇಳಿತ್ತು.
ಭಾರತದಲ್ಲಿ  20,000 ಟನ್‌ಗಳಷ್ಟು ಚಿನ್ನ ಠೇವಣಿಯಾಗುತ್ತದೆ ಎಂಬ ನಿರೀಕ್ಷೆ ಇದ್ದರೂ ಇಲ್ಲಿಯವರೆಗೆ ಜಿಎಂಎಸ್ ನಲ್ಲಿ 400 ಗ್ರಾಂನಷ್ಟೇ ಠೇವಣಿ ಆಗಿದೆ.
ಟಿಟಿಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಆಫ್ ಹೈದ್ರಾಬಾದ್ ಮತ್ತು ಇಂಡಿಯನ್ ಬ್ಯಾಂಕ್‌ನಲ್ಲಿ ಚಿನ್ನ ಠೇವಣಿ ಇರಿಸಿದೆ.  
ಆದಾಗ್ಯೂ, ಟಿಟಿಡಿ ಈ ಯೋಜನೆಯಲ್ಲಿ ಠೇವಣಿ ಮಾಡಿದರೆ, ಪ್ರತೀ ವರ್ಷ ಸುಮಾರು  80 ಕೆಜಿ ಚಿನ್ನ ಯೋಜನೆಗೆ ಸೇರ್ಪಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com