ಎಲ್ ‍ಜಿ ವಂಚನೆ ಪ್ರಕರಣ ತನಿಖೆಗೆ ಆದೇಶಿಸಿದ ಕೋರ್ಟ್

ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಉತ್ಪನ್ನಗಳ ತಯಾರಿಕಾ ಕಂಪನಿ ದಕ್ಷಿಣ ಕೊರಿಯಾ ಮೂಲದ ಎಲ್ ‍ಜಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಉತ್ಪನ್ನಗಳ ತಯಾರಿಕಾ ಕಂಪನಿ ದಕ್ಷಿಣ ಕೊರಿಯಾ ಮೂಲದ ಎಲ್ ‍ಜಿ(ಲ್ಕ್ಕಿ ಗೋಲ್ ಡ್‍ಸ್ಟಾರ್) ವಿರುದ್ಧದ ರು.118 ಕೋಟಿ ವಂಚನೆ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ 4ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. 
ಎಲ್ ‍ಜಿ ದೇಶದ ಇಂಡಿಯಾ ಹೌಸ್‍ಹೋಲ್ ಡ್ ಆ್ಯಂಡ್ ಹೆಲ್ ತ್‍ಕೇರ್(ಐಎಚ್‍ಎಚ್‍ಎಲ್ ) ಕಂಪನಿಗೆ ವಂಚಿಸಿದೆ ಎಂದು ಆರೋಪಿಸಲಾಗಿದೆ. 2004ರಲ್ಲಿ ಈ ಘಟನೆ ನಡೆದಿದ್ದು ಎಲ್ ‍ಜಿ ಕಂಪನಿಯ ಅಂಗಸಂಸ್ಥೆಗಳಾದ ಎಲ್ ‍ಜಿ ಎಚ್‍ಆ್ಯಂಡ್‍ಎಚ್, ಎಲ್ ‍ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ, ಎಲ್ ‍ಜಿ ಸಿಎನ್ ಎಸ್, ಎಲ್ ‍ಜಿ ಇಂಟರ್ ನ್ಯಾಷನಲ್  ಕಾರ್ಪೋರೇಷನ್ ಮತ್ತು ಎಲ್ ‍ಜಿ ಕಾರ್ಪ್ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಐಎಚ್‍ಎಚ್‍ಎಲ್ ‍ನ ಎಂಡಿ ವಿಜಯ್.ಆರ್.ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ ‍ಜಿ ಗ್ರೂಪ್ ಆಫ್ ಕಂಪನಿಯ ಐದು ವಿಭಾಗಗಳ ವಿರುದ್ಧ 2014ರಲ್ಲಿ ಐಎಚ್‍ಎಚ್‍ಎಲ್  ಕಂಪನಿ, ನಗರದ ಸಿಸಿಬಿ ಪೊಲೀಸರಿಗೆ ದೂರು ನೀಡಿತ್ತು. ಈ ಪೈಕಿ ಮೂರು ಅಂಗ ಸಂಸ್ಥೆಗಳು ಹೈಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದವು. ಉಳಿದ 2 ಅಂಗಸಂಸ್ಥೆಗಳ ವಿರುದ್ಧ ಸಿಆರ್‍ಪಿಸಿ ಕಲ್ಂ 41ಎ ಅನ್ವಯ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು 5 ಬಾರಿ ನೋಟಿಸ್ ನೀಡಿದ್ದರು. ಆದರೂ, ಕಂಪನಿ ಪರ ಯಾರೂ ತನಿಖೆಗೆ ಹಾಜರಾಗಿಲ್ಲ ಎಂದು ವಿಜಯ್ ಹೇಳಿದರು. 
ಹಿನ್ನೆಲೆ: ಐಎಚ್‍ಎಚ್‍ಎಲ್  ಸಹ ಸಂಸ್ಥಾಪಕ ವಿಜಯ್ 1998ರಿಂದ 2004ರ ಅವಧಿಯಲ್ಲಿ ಎಲ್ ‍ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ವಿತರಕರಾಗಿದ್ದರು. ಆಗ ವಹಿವಾಟು ವಿಸ್ತರಿಸಲೇ ಎಲ್ ‍ಜಿ ಜತೆ ರು.118 ಕೋಟಿ ವ್ಯವಹಾಪರ ಒಪ್ಪಂದ ಮಾಡಿಕೊಂಡರು. ಅದರಂತೆ ಎಲ್ ‍ಜಿ ಉತ್ಪನ್ನ ಖರೀದಿಸಿದವರಿಗೆ ಐಎಚ್‍ಎಚ್‍ಎಲ್ ನಿಂದದ ಹಣ ಪಾವತಿಸಲಾಗಿತ್ತು. ಜಾಹೀರಾತು, ವೇತನ, ಸುಂಕ ಇತ್ಯಾದಿ ಎಂದು ರು.58 ಕೋಟಿ ನೀಡಲಾಗಿತ್ತು. 
ಆದರೆ ಎಲ್ ‍ಜಿ ಕಂಪನಿ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಸರಬರಾಜು ಮಾಡಿತ್ತು. ಏತನ್ಮಧ್ಯೆ ಕಂಪನಿ ಪುನಾರಚನೆ, ಲೋಗೋ ಬದಲಾವಣೆ ಇತ್ಯಾದಿ ಎಂದು ಹೇಳಿ ಹಳೆ ಉತ್ಪನ್ನಗಳನ್ನು ನಾಶಪಡಿಸುವಂತೆ ಹೇಳಿತ್ತು. ಈ ಉತ್ಪನ್ನಗಳು ಈಗ ಗೋದಾಮುಗಳಲ್ಲಿ ತುಕ್ಕು ಹಿಡಿಯುತ್ತಿವೆ ಎಂದು ವಿಜಯ್ ವಿವರಿಸಿದರು. 
ವಿವಾದ ಇದ್ದರೂ ಎಲ್ ‍ಜಿ ಮತ್ತೆ ಭಾರತ ಪ್ರವೇಶದ ವಿರುದ್ಧ ದೂರು ನೀಡಲಾಯಿತು. ಆಗಲೂ ಎಲ್ ‍ಜಿ ಮೂರು ಅಂಗ ಸಂಸ್ಥೆಗಳ ವಿರುದ್ಧದ ತನಿಖೆಗೆ ತಡೆಯಾಜ್ಞೆ ತಂದಿದ್ದು ಉಳಿದ ಎರಡರ ವಿರುದ್ಧ ತನಿಖೆಗೆ ಆದೇಶ ನೀಡಿದೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com