ದೇಶಾದ್ಯಂತ ಏಕರೂಪ ಕನಿಷ್ಠ ವೇತನ ಶೀಘ್ರ

ದೇಶದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲೇ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲೇ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಶೀಘ್ರದಲ್ಲಿ ಕನಿಷ್ಠ ವೇತನ ಹೆಚ್ಚಿಸಲೇ ನಿರ್ಧರಿಸಿದೆ. ಈ ಕನಿಷ್ಠ ವೇತನವನ್ನು ದೇಶಾದ್ಯಂತ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಶಂಕರ್ ಅಗರ್ವಾಲ್ ಹೇಳಿದ್ದಾರೆ. 
ಎಲ್ಲ ಕ್ಷೇತ್ರದಲ್ಲೂ ಏಕ ರೀತಿಯ ಕನಿಷ್ಠ ವೇತನ ರೂಪಿಸಲೇ ಕೆಲ್ವು ನಿಯಮಗಳನ್ನು ರೂಪಿಸಲಾಗುವುದು ಎಂದು ಭಾರತೀಯ ಕೈಗಾರಿಕಾ ಒಕ್ಕೂಟ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅಗರ್ ವಾಲ್ ತಿಳಿಸಿದ್ದಾರೆ. 
ಕನಿಷ್ಠ ವೇತನ ಕಾಯ್ದೆ ಅಡಿಯಲ್ಲಿ ವೇತನ ಹೆಚ್ಚಿಸಲಿದ್ದು ಇದರಿಂದ ಕಾರ್ಮಿಕರು ಪ್ರಸ್ತುತ ಹಣದುಬ್ಬರಕ್ಕೆ ಅನುಗುಣವಾಗಿ ವೇತನ ಪಡೆಯಲಿದ್ದಾರೆ. ಇದರಿಂದ ಅವರಲ್ಲಿ ಖರೀದಿ ಶಕ್ತಿ ಹೆಚ್ಚಲಿದ್ದು ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳಲಿದೆ ಎಂದಿದ್ದಾರೆ. 
ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ಮೂಲ್ಕ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಿಸಬೇಕು. ಆಗ ತಯಾರಿಕಾ ವಲ್ಯ ಮತ್ತು ಇತರೆ ಕ್ಷೇತ್ರಗಳು ಚೇತರಿಸಿಕೊಳ್ಳಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿನ ಈಗಿನ ನಿಯಮಗಳ ಅನುಸಾರ ಕಾರ್ಮಿಕರು ಸಮವರ್ತಿ ಪಟ್ಟಿಯಲ್ಲಿ ಬರುತ್ತಾರೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರ ವ್ಯಾಪ್ತಿಯಲ್ಲಿ ಬರುವ ಕುಶಲ್, ಅರೆಕುಶಲ್ ಮತ್ತು ಇತರರಿಗೆ ಕನಿಷ್ಠ ವೇತನ ನಿಗದಿಪಡಿಸಲಿವೆ ಎಂದು ತಿಳಿಸಿದ್ದಾರೆ. 
ದೇಶದಲ್ಲಿನ ಕಾರ್ಮಿಕ ಸಂಘಟನೆಗಳು ಮಾಸಿಕ ಕನಿಷ್ಠ ವೇತನ ರು.15,000 ನಿಗದಿಪಡಿಸಬೇಕು. ಇದು ಇಡೀ ದೇಶಾದ್ಯಂತ ಅನ್ವಯವಾಗಬೇಕೆಂದು ಒತ್ತಾಯಿಸುತ್ತಿವೆ. ಹೀಗಾಗಿ ಕಾರ್ಮಿಕ ಸಚಿವಾಲ್ಯ ಕನಿಷ್ಠ ವೇತನ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಚಿಂತನೆ ನಡೆಸಿದೆ. ಹಣದುಬ್ಬರ ಏರಿಕೆಗೆ ಅನುಗುಣವಾಗಿ ದೇಶಾದ್ಯಂತ ಏಕ ರೀತಿಯ ನಿಯಮ ರೂಪಿಸುವತ್ತ ಚಿಂತನೆ ನಡೆಸಲಾಗಿದೆ ಎಂದು ಅಗರ್ವಾಲ್ ವಿವರಿಸಿದ್ದಾರೆ. 
ಕೇಂದ್ರ ಸರ್ಕಾರ ಶೀಘ್ರದಲ್ಲಿ ಎಲ್ಲ ಕಾರ್ಮಿಕರನ್ನು ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ವ್ಯಾಪ್ತಿಗೆ ತರುವ ಯೋಜನೆ ಯನ್ನೂ ಹೊಂದಿದೆ ಎಂದು ತಿಳಿಸಿದ್ದಾರೆ. ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವುದು ಅತಿದೊಡ್ಡ ಮತ್ತು ಸಂಕೀರ್ಣವಾದ ಸವಾಲಾಗಿದೆ ಎಂದು ಇದೇ ಸಭೆಯಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಭಾರತೀಯ ವಿಭಾಗದ ನಿರ್ದೇಶಕರಾದ ಪನುದ್ದ ಬೂನಪಾಲ್ ಹೇಳಿದ್ದಾರೆ. ಪರಸ್ಪರ ಮಾತುಕತೆ ಮತ್ತು ಬೇಡಿಕೆಗಳ ಕುರಿತು ಸಹಮತ ಮೂಡಿಸುವುದು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲೇ ಇರುವ ಏಕೈಕ ಹಾದಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com