ಚಿನ್ನದ ಬಾಂಡ್‍ಗೆ ಹೆಚ್ಚಿದ ಬೇಡಿಕೆ

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಚಾಲನೆ ನೀಡಿದ ಮಹತ್ವಾಕಾಂಕ್ಷಿ ಯೋಜನೆಗಳಾದ ಚಿನ್ನದ ನಗದೀಕರಣ ಯೋಜನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು  ಇತ್ತೀಚೆಗೆ ಚಾಲನೆ ನೀಡಿದ ಮಹತ್ವಾಕಾಂಕ್ಷಿ ಯೋಜನೆಗಳಾದ ಚಿನ್ನದ ನಗದೀಕರಣ ಯೋಜನೆಗೆ ಚಿನ್ನ ಹೊಂದಿರುವವರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಆದರೆ ಚಿನ್ನದ ಬಾಂಡ್ ಯೋಜನೆಗೆ ಹೆಚ್ಚಿನ ಬೇಡಿಕೆ ಬಂದಿದೆ. 

ಇದುವರೆಗೂ 917 ಕೆಜಿ ಮೌಲ್ಯದ ಚಿನ್ನಕ್ಕೆ 63,000 ಅರ್ಜಿಗಳು ಸಲ್ಲಿಕೆಯಾಗಿವೆ. ಇದರ ಒಟ್ಟು ಮೌಲ್ಯ ರು.246 ಕೋಟಿಗಳಾಗಿದೆ. ಹೂಡಿಕೆದಾರರಿಂದ ಭಾರಿ ಪ್ರತಿಕ್ರಿಯೆ ಸಿಕ್ಕಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಂಠದಾಸ್ ಟ್ವೀಟ್ ಮಾಡಿದ್ದಾರೆ. ಭೌತಿಕವಾಗಿ ಚಿನ್ನ ಖರೀದಿ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಯೋಜನೆಗಳನ್ನು ಪರಿಚಯಿಸಿತು. 
ನ.5 ರಿಂದ 20ರವರೆಗೂ ಗೋಲ್ಡ್ ಬಾಂಡ್‍ಗಳಿಗೆ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ನವೆಂಬರ್ 30ಕ್ಕೆ ಬಾಂಡ್ ಗಳನ್ನು ವಿತರಿಸಲಾಗುವುದು. ಗೋಲ್ಡ್ ಬಾಂಡ್ ಸ್ಕೀಂನಲ್ಲಿ ಹೂಡಿಕೆದಾರರಿಗೆ ಶೇ.2.75ರಷ್ಟು ಬಡ್ಡಿ ನೀಡಲಾಗುವುದು. ಬಾಂಡ್ ಮೌಲ್ಯ ಕನಿಷ್ಠ 2 ಗ್ರಾಂ ಇದ್ದು, ವ್ಯಕ್ತಿಯೊಬ್ಬರು 500 ಗ್ರಾಂವರೆಗೂ ಖರೀದಿಸಬಹುದು. 
ಈ ಕಂತಿನಲ್ಲಿ ಒಂದು ಗ್ರಾಂ ದರ ರು.2,684ರಂತೆ ನೀಡಲಾಗಿದೆ. ಚಿನ್ನದ ಬಾಂಡ್ ಸ್ಕೀಂ ಜೊತೆಗೆ ಚಿನ್ನದ ನಗದೀಕರಣ ಯೋಜನೆ ಜಾರಿಗೆ ತರಲಾಯಿತು. ಆದರೆ ಜನರ ಸ್ಪಂದನೆ ಸಿಗದೆ ಇದುವರೆಗೂ 400 ಗ್ರಾಂಗಳಿಗೆ ಮಾತ್ರ ಅರ್ಜಿ ಸಲ್ಲಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com