ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೆಟ್ವರ್ಕ್: ಏರ್ ಟೆಲ್ ನಿಂದ 60 ಸಾವಿರ ಕೋಟಿ ಹೂಡಿಕೆ

ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೆಟ್ವರ್ಕ್ ನೀಡುವುದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುವುದಾಗಿ ಭಾರತಿ ಏರ್ ಟೆಲ್ ಸಂಸ್ಥೆ ತಿಳಿಸಿದೆ.
ಏರ್ ಟೆಲ್
ಏರ್ ಟೆಲ್

ನವದೆಹಲಿ: ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೆಟ್ವರ್ಕ್ ನೀಡುವುದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುವುದಾಗಿ ಭಾರತಿ ಏರ್ ಟೆಲ್ ಸಂಸ್ಥೆ ತಿಳಿಸಿದೆ.
ನೆಟ್ವರ್ಕ್ ಪರಿವರ್ತನೆಗಾಗಿ ಪ್ರಾಜೆಕ್ಟ್ ಲೀಪ್ ಎಂಬ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಧ್ವನಿ ಸೇವೆಗಳನ್ನು ಸುಧಾರಿಸುವುದಕ್ಕೆ ಹೆಚ್ಚಿನ ಬಂಡವಾಳ ಹೂಡಲಾಗುತ್ತಿದೆ ಎಂದು ಭಾರತಿ ಏರ್ ಟೆಲ್ ನ ಎಂಡಿ, ಸಿಇಒ,  ಗೋಪಾಲ್ ವಿಠಲ್ ತಿಳಿಸಿದ್ದಾರೆ.
ನೆಟ್ವರ್ಕ್ ಸುಧಾರಣೆಗಾಗಿ ಏರ್ ಟೆಲ್ ಸಂಸ್ಥೆ ಸುಮಾರು 70 ಸಾವಿರ ಬೇಸ್ ಸ್ಟೇಷನ್ ಗಳನ್ನು 2015 -16 ನಲ್ಲಿ ನಿಯೋಜಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com