ರೆಪೋ ದರಕ್ಕೆ ಅನುಗುಣವಾಗಿ ಸಣ್ಣ ಉಳಿತಾಯದ ಬಡ್ಡಿ ದರ?

ಅಂಚೆ ಕಚೇರಿ ಠೇವಣಿ, ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಇನ್ನು ಮುಂದೆ ಆಗಾಗ್ಗೆ ಬದಲಾವಣೆಗಳಾಗುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅಂಚೆ ಕಚೇರಿ ಠೇವಣಿ, ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಇನ್ನು ಮುಂದೆ ಆಗಾಗ್ಗೆ ಬದಲಾವಣೆಗಳಾಗುವ ಸಾಧ್ಯತೆಯಿದೆ. 

ಸಣ್ಣ ಉಳಿತಾ ಯ ಯೋಜನೆಗಳ ಬಡ್ಡಿ ದರವನ್ನು ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಪರಿಷ್ಕರಿಸುವ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಚಿಂತನೆ ನಡೆಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 
ಈ ಬಗ್ಗೆ ಮಾತನಾಡಿರುವ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್, ``ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರದ ಭದ್ರತಾ ಪತ್ರಗಳಿಗೆ ಲಿಂಕ್ ಮಾಡುವುದೋ ಅಥವಾ ಪರ್ಯಾಯ ವ್ಯವಸ್ಥೆ ಮಾಡುವುದೋ ಎಂಬ ಕುರಿತು ಪರಿಶೀಲಿಸಲಾಗುತ್ತಿದೆ. 
ಈ ಬಡ್ಡಿ ದರವನ್ನು ರೆಪೋ ದರಕ್ಕೆ ಅಥವಾ ಬ್ಯಾಂಕ್ ಠೇವಣಿಗಳ ದರಕ್ಕೆ ಲಿಂಕ್ ಮಾಡುವಂತೆ ಸಲಹೆಗಳು ಕೇಳಿಬಂದಿವೆ. ಆದರೆ, ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ'' ಎಂದಿದ್ದಾರೆ. ಸದ್ಯಕ್ಕೆ ಸರ್ಕಾರದ ಭದ್ರತಾ ಪತ್ರಗಳ ರಿಟರ್ನ್ಸ್‍ಗೆ ಅನುಗುಣವಾಗಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ವರ್ಷಕ್ಕೊಮ್ಮೆ ನಿಗದಿಪಡಿಸಲಾಗುತ್ತಿದೆ.
 ಇದೇ ವೇಳೆ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಿದ್ದರೆ, ಬ್ಯಾಂಕ್ ನಿಶ್ಚಿತ ಠೇವಣಿಗಳ ಬಗ್ಗೆ ಜನ ಆಸಕ್ತಿ ಕಳೆದು ಕೊಳ್ಳುತ್ತಾರೆ. ಹಾಗಾಗಿ ಸಣ್ಣ ಉಳಿತಾಯಗಳ ಬಡ್ಡಿ ದರವನ್ನು ಕಡಿಮೆಮಾಡಿ ಎಂದು ಬ್ಯಾಂಕುಗಳು ಸರ್ಕಾರವನ್ನು ಆಗ್ರಹಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com