ಸಾಂದರ್ಭಿಕ ಚಿತ್ರ
ವಾಣಿಜ್ಯ
ವೊಡಾಫೋನ್ ಪರ ತೀರ್ಪು
ಹಚಿಸನ್ ಖರೀದಿಗೆ ಸಂಬಂಧಿಸಿದ ರು.8,500 ಕೋಟಿ ತೆರಿಗೆ ಪಾವತಿ ವಿವಾದದಲ್ಲಿ ಬಾಂಬೆ ಹೈಕೋರ್ಟ್ ವೊಡಾಫೋನ್ ಪರ...
ಮುಂಬೈ: ಹಚಿಸನ್ ಖರೀದಿಗೆ ಸಂಬಂಧಿಸಿದ ರು.8,500 ಕೋಟಿ ತೆರಿಗೆ ಪಾವತಿ ವಿವಾದದಲ್ಲಿ ಬಾಂಬೆ ಹೈಕೋರ್ಟ್ ವೊಡಾಫೋನ್ ಪರ ತೀರ್ಪು ನೀಡಿದೆ.
2007ರಲ್ಲಿ ವೊಡಾಫೋನ್ ತನ್ನ ಕಾಲ್‍ಸೆಂಟರ್ ವಹಿವಾಟನ್ನು ಹಚಿಸನ್‍ಗೆ ಮಾರಾಟ ಮಾಡಿತ್ತು. ಈ ಡೀಲ್ ನಲ್ಲಿ ಗಳಿಸಿದ್ದ ಲಾಭಕ್ಕೆ ರು.8,500 ಕೋಟಿ ತೆರಿಗೆ ಪಾವತಿಸಬೇಕೆಂದು ತೆರಿಗೆ ನ್ಯಾಯ ಮಂಡಳಿ ಕಳೆದ ವರ್ಷ ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ವೊಡಾಫೋನ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ತೀರ್ಪು ತುಂಬಾ ಪ್ರಮುಖವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಲವು ಡೀಲ್‍ಗಳಿಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಈ ಕಾರಣದಿಂದಾಗಿ ಯುಪಿಎ ಸರ್ಕಾರ ದೇಶದ ತೆರಿಗೆ ನೀತಿಯನ್ನು ಪೂರ್ವಾನ್ವಯವಾಗುವಂತೆ ತಿದ್ದುಪಡಿ ಮಾಡಲು ಮುಂದಾಗಿತ್ತು. ಆದರೆ ಹಾಲಿ ಎನ್ ಡಿಎ ಸರ್ಕಾರ ಅಂತಹ ಯೋಜನೆಯನ್ನು ಕೈಬಿಟ್ಟಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ