ಹಬ್ಬದ ಮಾರಾಟ: ೧೦ ಘಂಟೆಗಳಲ್ಲಿ ೧ ದಶಲಕ್ಷ ಉತ್ಪನ್ನಗಳನ್ನು ಮಾರಿದ ಫ್ಲಿಪ್ಕಾರ್ಟ್

ಹಬ್ಬದ 'ಬಿಗ್ ಬಿಲಿಯನ್ ಡೇಸ್' ಮಾರಾಟದಲ್ಲಿ ೧೦ ಘಂಟೆಗಳಲ್ಲಿ ಒಂದು ದಶಲಕ್ಷ ಉತ್ಮನ್ನಗಳನ್ನು ಮಾರಾಟ ಮಾಡಿರುವುದಾಗಿ ಇ ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್
ಫ್ಲಿಪ್ಕರ್ಟ್ ಸಂಸ್ಥೆಯ ಲೋಗೋ
ಫ್ಲಿಪ್ಕರ್ಟ್ ಸಂಸ್ಥೆಯ ಲೋಗೋ

ಮುಂಬೈ: ಹಬ್ಬದ 'ಬಿಗ್ ಬಿಲಿಯನ್ ಡೇಸ್' ಮಾರಾಟದಲ್ಲಿ ೧೦ ಘಂಟೆಗಳಲ್ಲಿ ಒಂದು ದಶಲಕ್ಷ ಉತ್ಮನ್ನಗಳನ್ನು ಮಾರಾಟ ಮಾಡಿರುವುದಾಗಿ ಇ ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಹೇಳಿಕೊಂಡಿದೆ. ದೇಶದಾದ್ಯಂತ ೬ ದಶಲಕ್ಷ ಜನರು ಈ ಆಪ್ ನಿಂದ ಉತ್ಪನ್ನಗಳನ್ನು ಖರೀದಿಸಿದ್ದು, ಸರಾಸರಿಯಂತೆ ಒಂದು ಸೆಕಂಡಿಗೆ ೨೫ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ.

ಮೆಟ್ರೋ ನಗರಗಳಿಂದ ಬೆಂಗಳೂರು, ದೆಹಲಿ ಮತ್ತು ಚೆನ್ನೈನಿಂದ ಅತಿ ಹೆಚ್ಚು ಜನರು ಈ ಮಾರಾಟದಲ್ಲಿ ಭಾಗವಹಿಸಿದ್ದರೆ ಲುಧಿಯಾನ, ಲಕನೌ ಮತ್ತು ಭೋಪಾಲ್ ನಗರಗಳಲ್ಲಿ ಕೂಡ ಜನರು ಹೆಚ್ಚಿನ ಉತ್ಸಾಹ ತೋರಿದ್ದಾರೆ ಎಂದು ಪ್ಲಿಪ್ಕಾರ್ಟ್ ಹೇಳಿಕೆಯಲ್ಲಿ ತಿಳಿಸಿದೆ.

ಪಾದರಕ್ಷೆಗಳು ಮತ್ತು ಪುರುಷರ ಬಟ್ಟೆಗಳು ಅತಿ ಹೆಚ್ಚು ಮಾರಾಟವಾಗಿದೆಯಂತೆ. "ನಾವು ೧ ಮಿಲಿಯನ್ ಉತ್ಪನ್ನಗಳನ್ನು ಮಾರಾಟ ಮಾಡಿದ್ದೇವೆ. ಇಂದು ಫ್ಯಾಶನ್ ಮಾರಾಟದಲ್ಲಿ ಇನ್ನೂ ಹೆಚ್ಚಿನ ವ್ಯಾಪಾರ ಆಗುವ ಸಾಧ್ಯತೆಯಿದೆ. ಕಳೆದ ಎರಡು ದಿನಗಳಲ್ಲಿ ೧.೬ ದಶಲಕ್ಷ ಜನ ನಮ್ಮ ಆಪ್ ಮೊಬೈಲ್ ಫೋನುಗಳಲ್ಲಿ ಹಾಕಿಕೊಂಡಿದ್ದಾರೆ" ಎಂದು ಪ್ಲಿಪ್ಕಾರ್ಟ್ ನ ಮುಖೇಶ್ ಭನ್ಸಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com