ಹಳ್ಳಿಗಳಲ್ಲಿ ಸ್ವಯಂ ಉದ್ಯೋಗ ಸಾಲ

ಇನ್ನು ಮುಂದೆ ಗ್ರಾಮೀಣ ಭಾಗದ ಯುವಕ, ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರ ರು.50,000 ವರೆಗೂ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇನ್ನು ಮುಂದೆ ಗ್ರಾಮೀಣ ಭಾಗದ ಯುವಕ, ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರ ರು.50,000 ವರೆಗೂ ಜಾಮೀನು ರಹಿತ ಸಾಲ ನೀಡಲು ನಿರ್ಧರಿಸಿದೆ. ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ರಾಜೀವ್‍ಗಾಂಧಿ ಯುವ ಚೈತನ್ಯ ಯೋಜನೆಯಡಿ ಈ ಸೌಲಭ್ಯ ನೀಡಲು ತೀರ್ಮಾಸಲಾಗಿದ್ದು, ಇದಕ್ಕಾಗಿ ಗ್ರಾಮೀಣ ವಿಕಾಸ ಬ್ಯಾಂಕ್ ಸಾಲ ಸೌಲಭ್ಯ ನೀಡಲು ಮುಂದೆ ಬಂದಿದೆ. 

ಗ್ರಾಮೀಣಭಿವೃದ್ಧಿ, ಪಂಚಾಯತ್ ರಾಜ್  ಮತ್ತು ಗ್ರಾಮೀಣ ವಿಕಾಸ ಬ್ಯಾಂಕ್ ನಡುವೆ ಗುರುವಾರ ಗಾಂಧಿಭವನದಲ್ಲಿ ನಡೆದ ಎಂಜಿನಿ ಯರ್‍ಗಳ ಸಂಕಲ್ಪ ದಿನ ಕಾರ್ಯ ಕ್ರಮದಲ್ಲಿ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಇಲಾಖೆಯ ¸ಸಚಿವ ಎಚ್ಕೆ ಪಾಟೀಲ್ ಮತ್ತು ಗ್ರಾಮೀಣ ವಿಕಾಸ ಬ್ಯಾಂಕ್ ನ ಹಿರಿಯ ಅಧಿಕಾರಿಗಳೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಸಹಿ ಹಾಕಿದರು. 
ಗ್ರಾಮೀಣ ಯುವ ಜನತೆಗೆ ಸ್ವಾವಲಂಬನೆ ಹೆಚ್ಚಿಸಲು ಇಲಾಖೆ 2013ರಲ್ಲಿ ರಾಜೀವ್ ಗಾಂಧಿ ಯುವ ಚೈತನ್ಯ ಯೋಜನೆ ಆರಂಭಿಸಲಾಗಿತ್ತು. ಆರಂಭದಲ್ಲಿ ಈ ಈ ಯೋಜನೆಯಲ್ಲಿ ಸ್ವಂತ ಉದ್ಯೋಗ ಬಯಸುವ ಯುವಕ, ಯುವತಿಯರಿಗೆ ತರಬೇತಿ ಮತ್ತು ಉದ್ಯೋಗ ಅವಕಾಶಗಳನ್ನು ದೊರಕಿಸಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com