ಬಜಾಜ್ ಸಂಸ್ಥೆಯ ನಿವ್ವಳ ಲಾಭ ಶೇ.58 ರಷ್ಟು ಏರಿಕೆ

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕೆ ಉದ್ಯಮದ ದಿಗ್ಗಜ ಬಜಾಜ್ ಸಂಸ್ಥೆ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ.58 ರಷ್ಟು ನಿವ್ವಳ ಲಾಭ ಪ್ರಕಟಿಸಿದೆ.
ಬಜಾಜ್(ಸಂಗ್ರಹ ಚಿತ್ರ)
ಬಜಾಜ್(ಸಂಗ್ರಹ ಚಿತ್ರ)

ಮುಂಬೈ: ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕೆ ಉದ್ಯಮದ ದಿಗ್ಗಜ ಬಜಾಜ್ ಸಂಸ್ಥೆ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ.58 ರಷ್ಟು ನಿವ್ವಳ ಲಾಭ ಪ್ರಕಟಿಸಿದೆ.
ಕಳೆದ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ 590 .90 ಕೋಟಿಯಲ್ಲಿದ್ದ ಸಂಸ್ಥೆಯ ಲಾಭ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ 933 .06 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್(ಬಿ.ಎಸ್.ಸಿ) ಯ ಪ್ರಕಾರ ಕಂಪನಿಯ ಆದಾಯ ಶೇ.2 .25 ರಷ್ಟು ಏರಿಕೆಯಾಗಿದೆ.
2014 -15 ರ ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಒಟ್ಟು ಲಾಭ 5,963.09 ಕೋಟಿಯಿಂದ 6,097.78 ಕೋಟಿಗೆ ಏರಿಕೆಯಾಗಿತ್ತು. ಪರಿಶೀಲನೆಯಲ್ಲಿರುವ ಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಉತ್ಪನ್ನಗಳ ಮಾರಾಟ ಶೇ.0 .09 ರಷ್ಟು(1,056,596 ರಿಂದ 1,055,582 ಯುನಿಟ್) ಗಳು ಏರಿಕೆಯಾಗಿದ್ದರೆ, ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಸಂಸ್ಥೆಯ ನಿವ್ವಳ ಲಾಭ ಶೇ.46.35 ರಷ್ಟು ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com