
ಮುಂಬೈ: ಅಕ್ಟೋಬರ್ ನಿಂದ ಜನವರಿ ವರೆಗಿನ ಬಳಕೆಗೆ ಭಾರತ 2 .5 ಮಿಲಿಯನ್ ಟನ್ ತೊಗರಿಬೇಳೆ ಆಮದು ಮಾಡಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಕಳೆದ ವಾರ ವಿಧಿಸಿದ್ದ ದಾಸ್ತಾನು ಮಿತಿ ನೀತಿಯನ್ನು ಮುಂದುವರೆಸಿದರೆ ಆಮದುಮಾಡಿಕೊಳ್ಳುವುದಕ್ಕೆ ಅಡಚಣೆ ಉಂಟಾಗಲಿದೆ.
ಕೆನಡಾ, ಮಯಾನ್ಮಾರ್, ಆಸ್ಟ್ರೇಲಿಯಾ ಮುಂತಾದ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಿದರೆ ತೊಗರಿ ಬೇಳೆ ಕೊರತೆ ಹೆಚ್ಚಾಗಲಿದ್ದು ಬೆಲೆ ಏರಿಕೆ ಮುಂದುವರೆಯಲಿದೆ ಎಂದು ವ್ಯಾಪಾರ ಅಂಗ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಮಾಹಾರಾಷ್ಟ್ರದಲ್ಲಿರುವ ಮುಂಬೈ ಬಂದರು ಅರ್ಧ ಭಾಗದಷ್ಟು ಆಮದನ್ನು ನಿರ್ವಹಿಸುತ್ತದೆ. ಅಕ್ರಮ ದಾಸ್ತಾನನ್ನು ತಡೆಗಟ್ಟಲು ಮಹಾರಾಷ್ಟ್ರ ಸರ್ಕಾರ ಕಳೆದ ವಾರದಿಂದ ಆಮದು ಮಿತಿಯನ್ನು 350 ಟನ್ ಗಳಿಗೆ ನಿಗದಿ ಮಾಡಿದೆ.
Advertisement