ವಾಣಿಜ್ಯ
25 ರೂಪಾಯಿ ಮುಖಬೆಲೆ ನೋಟು ಮುದ್ರಣ ಸಾಧ್ಯವಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ
25 ರೂಪಾಯಿ ಮುಖಬೆಲೆಯ ನೋಟುಗಳನ್ನು ಪರಿಚಯಿಸುವುದಿಲ್ಲ ಎಂದು ಹಣಕಾಸು ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ.
ನವದೆಹಲಿ: 25 ರೂಪಾಯಿ ಮುಖಬೆಲೆಯ ನೋಟುಗಳನ್ನು ಪರಿಚಯಿಸುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
5 ರೂಪಾಯಿ ಮುಖಬೆಲೆಯ ನಾಣ್ಯಗಳ ಅಭಾವ ಎದುರಾಗಿರುವುದರಿಂದ 25 ರೂಪಾಯಿ ಮುಖಬೆಲೆಯ ನೋಟುಗಳನ್ನು ಪರಿಚಯಿಸುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದರು. ಕರೆನ್ಸಿ ಉತ್ಪಾದನೆ ಮಾನದಂಡಗಳ ಅಳತೆಗೋಲಿಗೆ ವಿರುದ್ಧವಾಗಿರುವುದರಿಂದ 25 ರೂಪಾಯಿ ಮುಖಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ನಾಣ್ಯಗಳ ಕೊರತೆಯನ್ನು ಕಡಿಮೆಮಾಡಲು ಕೇಂದ್ರ ಸರ್ಕಾರ 1 ರೂಪಾಯಿ 5 ರೂಪಾಯಿ ನಾಣ್ಯಗಳ ಜತೆ 10 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಹೆಚ್ಚು ಉತ್ಪಾದನೆ ಮಾಡಬೇಕು ಎಂದು ಹಣಕಾಸು ಇಲಾಖೆ ಹೇಳಿದೆ.


