
ನವದೆಹಲಿ: ವೇಗವಾಗಿ ವೃದ್ಧಿಸುತ್ತಿರುವ ಮಾರಾಟಗಾರರ ಸಂಖ್ಯೆಯಿಂದ ಉತ್ತೇಜಿತರಾಗಿರುವ ಅಮೆಜಾನ್.ಇನ್ ಸಂಸ್ಥೆ ಏಳು ಹೊಸ ಉಗ್ರಾಣಗಳನ್ನು ಸ್ಥಾಪಿಸುವುದರ ಮೂಲಕ ಹೂಡಿಕೆಗೆ ಕೈಹಾಕಿದೆ ಎಂದು ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ಹೊಸ ಕೇಂದ್ರಗಳು ಅಹಮದಾಬಾದ್, ದೆಹಲಿ, ಕೋಲ್ಕತ್ತ, ನಾಗಪುರ, ಗುರಗಾಂವ್, ಪುಣೆ ಮತ್ತು ಮುಂಬೈ ನಗರಗಳಲ್ಲಿ ಪ್ರಾರಂಭವಾಗಲಿವೆ. ಇವುಗಳ ಪ್ರಾರಂಭದಿಂದ ಅಮೆಜಾನಿನ ಒಟ್ಟು ದಾಸ್ತಾನು ಕೇಂದ್ರಗಳ ಸಂಖ್ಯೆ ೨೦ ಕ್ಕೆ ಏರಿದ್ದು, ೧೦ ರಾಜ್ಯಗಳಲ್ಲಿ ೧.೬ ದಶಲಕ್ಷ ಚದರಡಿಯ ದಾಸ್ತಾನು ಶಕ್ತಿ ಹೊಂದಿದೆ ಎಂದು ಹೇಳಿಕೆ ತಿಳಿಸಿದೆ.
"ನಮ್ಮ ಅಂತರ್ಜಾಲದಲ್ಲಿ ಮಾರಾಟ ಮಾಡುತ್ತಿರುವ ಮಾರಾಟಗಾರರು ಗಳಿಕೆಯಲ್ಲಿ ಅತಿ ಹೆಚ್ಚು ಏರಿಕೆಯನ್ನು ಕಂಡಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಮಾರಾಟವಾದ ಉತ್ಪನ್ನಗಳ ಸಂಖ್ಯೆಯಲ್ಲಿ ೫೦೦% ಅಭಿವೃದ್ಧಿ ಕಂಡಿದೆ" ಎಂದು ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಅಮಿತ್ ಅಗರವಾಲ್ ತಿಳಿಸಿದ್ದಾರೆ.
ಅಮೆಜಾನ್ ಅಂತರ್ಜಾಲ ಇಕಾಮರ್ಸ್ ಸಂಸ್ಥೆ ಭಾರತದಲ್ಲಿ ಪ್ಲಿಪ್ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ಸಂಸ್ಥೆಗಳೊಂದಿಗೆ ಸ್ಪರ್ಧೆಗೆ ಬಿದ್ದಿದೆ.
Advertisement