ಟ್ರೂಜೆಟ್‍ನಿಂದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವೈಮಾನಿಕ ಸೇವೆಗೆ ಚಾಲನೆ

ಟ್ರೂಜೆಟ್, ಪ್ರಾದೇಶಿಕ ವೈಮಾನಿಕ ಸೇವಾ ಸಂಸ್ಥೆಯಾಗಿದ್ದು, ಇಂದು ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವೈಮಾನಿಕ ಸಂಪರ್ಕ ಆರಂಭಿಸುವುದನ್ನು ಘೋಷಿಸಿತು.
ಟ್ರೂಜೆಟ್‍ನಿಂದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವೈಮಾನಿಕ ಸೇವೆಗೆ ಚಾಲನೆ
ಟ್ರೂಜೆಟ್‍ನಿಂದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವೈಮಾನಿಕ ಸೇವೆಗೆ ಚಾಲನೆ

ಬೆಂಗಳೂರು, ಸೆಪ್ಟೆಂಬರ್ 10, 2015: ಟ್ರೂಜೆಟ್, ವೈಮಾನಿಕ ಸಂಪರ್ಕವಿಲ್ಲದ ಪ್ರದೇಶ, ಮಾರುಕಟ್ಟೆ ಅವಕಾಶಗಳನ್ನು ಕೇಂದ್ರವಾಗಿರಿಸಿದ ಪ್ರಾದೇಶಿಕ ವೈಮಾನಿಕ ಸೇವಾ ಸಂಸ್ಥೆಯಾಗಿದ್ದು, ಇಂದು ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವೈಮಾನಿಕ ಸಂಪರ್ಕ ಆರಂಭಿಸುವುದನ್ನು ಘೋಷಿಸಿತು. ಉದ್ಘಾಟನಾ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ 16.25 ಗಂಟೆಗೆ ಆಗಮಿಸಲಿದ್ದು, 16.50 ಗಂಟೆಗೆ ನಿರ್ಗಮಿಸಲಿದೆ. ಈ ವಿಮಾನಯಾನದೊಂದಿಗೆ ಔರಂಗಾಬಾದ್ (ಶಿರಡಿ) ಕೂಡಾ ಬೆಂಗಳೂರಿಗೆ ಹೈದರಾಬಾದ್ ಮೂಲಕ ಸಂಪರ್ಕಕ್ಕೆ ಬರಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟರ್ಬೋ ಮೇಘಾ ಏರ್‍ವೇರ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ವಂಕಲಾಯಪತಿ ಉಮೇಶ್‍ಅವರು, `ಟೈಯರ್ 1 ನಗರಗಳ ಜತೆಗೆ ಟೈಯರ್ 2 ಮತ್ತು 3ನೇ ಹಂತದ ನಗರಗಳನ್ನು ಸಂಪರ್ಕಕಲ್ಪಿಸುವುದು ನಮ್ಮಧ್ಯೇಯ’ ಎಂದರು.

ಕರ್ನಾಟಕದಲ್ಲಿ ಟ್ರೂಜೆಟ್‍ನ ಯೋಜನೆಗಳನ್ನು ಉಲ್ಲೇಖಿಸಿದ ಅವರು, ತಕ್ಷಣದಲ್ಲಿ ನಾವು ಬೆಂಗಳೂರು ಮತ್ತು ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ ಜತೆಗೆ  ಸಂಪರ್ಕಕಲ್ಪಿಸುವ ಯೋಜನೆಯಿದೆ. ಮುಂದುವರಿದು ಬೆಂಗಳೂರು ಜತೆಗೆಕೊಚ್ಚಿ, ಔರಂಗಾಬಾದ್‍ಗೆ ನೇರ ವಿಮಾನಯಾನ ಸಂಪರ್ಕ ಒದಗಿಸುವ ಗುರಿ ಇದೆ ಎಂದರು.

ದಕ್ಷಿಣ ಭಾರತದಾದ್ಯಂತ ಟ್ರೂಜೆಟ್ ವಿಜಯವಾಡಾ, ವೈಜಾಗ್, ಕೊಯಮತ್ತೂರು, ಮಧುರೈ, ಟೂಟಿಕಾನರ್, ಸೇಲಂಗೆ ವಿಮಾನಯಾನ ಸಂಪರ್ಕಕಲ್ಪಿಸುವಗುರಿ ಹೊಂದಿದೆಎಂದರು.
ವಂಕಲಾಯಪತಿ ಉಮೇಶ್‍ರವರು, `ಪ್ರಮುಖ ಸ್ಥಳಗಳಿಗೆ ಅನುಕೂಲಕರ ಮತ್ತು ಕೈಗೆಟುಕುವ ದರದಲ್ಲಿ ಇಮಾನಯಾನ ಸಂಪರ್ಕಕಲ್ಪಿಸವ ಜತೆಗೆ ಟ್ರೂಜೆಟ್ ವಿವಿಧ ದೇಗುಲಗಳು, ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಒದಗಿಸುವ ಮೂಲಕ ದೇಗುಲ ಪ್ರವಾಸೋದ್ಯಮವನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ಕಾರ್ಯಕ್ರಮದ ಅಂಗವಾಗಿ ನಾವು ಈಗಾಗಲೇ ಹೈದರಾಬಾದ್ ಜತೆಗೆ ತಿರುಪತಿ ಮತ್ತು ಔರಂಗಾಬಾದ್‍ಗೆ ಸಂಪರ್ಕಕಲ್ಪಿಸುತ್ತಿದ್ದು, ಈ ಮೂಲಕ ತಿರುಮಲ ಮತ್ತು ಶಿರಡಿಗೆ ಭಕ್ತರು ಭೇಟಿ ನೀಡುವುದು ಸಾಧ್ಯವಾಗಲಿದೆ’ ಎಂದರು. ಅಂತೆಯೇ, ತಕ್ಣಣದಲ್ಲಿ ಬೆಂಗಳೂರು ಜತೆಗೆತಿರುಪತಿ ಮತ್ತು ಔರಾಂಗಾಬಾದ್‍ಗೂ ವಿಮಾನಯಾನ ಆರಂಭಿಸಲಾಗುವುದು ಎಂದರು. ಟ್ರೂಜೆಟ್ ಈಗಾಗಲೇ ದೇಗುಲ ಪ್ರವಾಸೋದ್ಯಮ ಕುರಿತು ನೀಲನಕ್ಷೆ ರೂಪಿಸಿದೆ. ಸಾಧ್ಯವಾದಷ್ಟು ನೇರ ವಿಮಾನಯಾನ ಕಲ್ಪಿಸಲು ಒತ್ತು ನೀಡಲಿದೆ ಎಂದರು.

ಪ್ರಸ್ತುತ, ಟ್ರೂಜೆಟ್ 72 ಆಸನ ಸಾಮಥ್ರ್ಯದ ಎಟಿಆರ್ 72-500 ವಿಮಾನಗಳನ್ನು ಹೊಂದಿದೆ. ಟ್ರೂಜೆಟ್ ಇಂಥದೇ ಇನ್ನಷ್ಟು ವಿಮಾನಗಳನ್ನು ಈ ತಿಂಗಳ ಅಂತ್ಯದೊಳಗೆ ಸೇರ್ಪಡೆಗೊಳಿಸಲಿದೆ. ಹಾಗೆಯೇ, ನವೆಂಬರ್ ಮತ್ತು ಡಿಸೆಂಬರ್‍ನಲ್ಲೂ ತಲಾ ಒಂದು ವಿಮಾನ ಸೇರ್ಪಡೆಯಾಗಲಿದೆ. ಜನವರಿ 2016ರ ವೇಳಗೆ ಟ್ರೂಜೆಟ್ ಒಟ್ಟು 5 ವಿಮಾನಗಳ ಯಾನವನ್ನು ಆರಂಭಿಸಲಿದೆ ಎಂದರು.

ಟ್ರೂಜೆಟ್‍ ಕುರಿತು:
ಟ್ರೂಜೆಟ್ ಪ್ರಾದೇಶಿಕ ವೈಮಾನಿಕ ಸಂಸ್ಥೆಯಾಗಿದ್ದು, ಟರ್ಬೋ ಮೆಘಾ ಏರ್‍ವೇಸ್ ಪ್ರೈವೇಟ್ ಲಿಮಿಟೆಡ್‍ಅನ್ನು ನಿರ್ವಹಣೆ ಮಾಡುತ್ತಿದೆ. ಹೈದರಾಬಾದ್‍ನಲ್ಲಿ ಮುಖ್ಯಕಚೇರಿ ಹೊಂದಿದೆ. ಕಂಪನಿಯನ್ನು ವೈಮಾನಿಕ ಉದ್ಯಮಿ ವಂಕಲಾಯಪಟ್ಟಿ ಉಮೇಶ್ ಮತ್ತು ಹೆಸರಾಂತ ನಟ ರಾಮಚರಣ್, ಜಂಟಿಯಾಗಿ ಸ್ಥಾಪಿಸಿದ್ದು. ಪ್ರೇಮ್‍ಕುಮಾರ್ ಇದರ ನಿರ್ದೇಶಕರಾಗಿದ್ದಾರೆ.
ಪ್ರಸ್ತುತ, ಪ್ರಮುಖಧಾರ್ಮಿಕ ತಾಣಗಳಿಗೆ ವಿಮಾನಯಾನ ಸೌಲಭ್ಯಕಲ್ಪಿಸುತ್ತಿದೆ. ಟ್ರೂಜೆಟ್ ಹೈದರಾಬಾದ್ ಮತ್ತು ಔರಂಗಾಬಾದ್ ನಡುವೆ ಸಂಪರ್ಕಕಲ್ಪಿಸುವ ಏಕೈಕ ವಿಮಾನ ಸಂಸೆಯಾಗಿದೆ. ಔರಂಗಾಬಾದ್ ಮೂಲಕ ಶಿರಡಿಗೆ ಪ್ರಯಾಣ ತೆರಳಬಹುದು. ಜೊತೆಗೆ ತಿರುಪತಿಯಿಂದ ಔರಂಗಾಬಾದ್‍ಗೂ (ಹೈದರಾಬಾದ್ ಮೂಲಕ) ಮತ್ತು ಚೆನ್ನೈನಿಂದ ಔರಂಗಾಬಾದ್‍ಗೂ ಸಂಪರ್ಕಕಲ್ಪಿಸಲಾಗುತ್ತಿದೆ. ಈಗ ಬೆಂಗಳೂರು-ಹೈದರಾಬಾದ್ -ಬೆಂಗಳೂರು ನಡುವೆ ಸಂಪರ್ಕಕಲ್ಪಿಸುವ ಜೊತೆಗೆ ಸಿಲಿಕಾನ್‍ವ್ಯಾಲಿಗೆ ನೆರೆ ರಾಜಧಾನಿ ಜತೆಗೆ ಸಂಪರ್ಕ ಕಲ್ಪಿಸಿದಂತಾಗಿದೆ. ಟ್ರೂಜೆಟ್ ಪ್ರಸ್ತುತ ಹೈದರಾಬಾದ್–ಚೆನ್ನೈ ನಡುವೆ ನಿತ್ಯ ಎರಡು ಬಾರಿ ವಿಮಾನಯಾನ ಕಲ್ಪಿಸುತ್ತಿದೆ.

ಟ್ರೂಜೆಟ್ ತೊಡಕು ರಹಿತ ವಿಮಾನಯಾನ ಒದಗಿಸಲು ಒತ್ತು ನೀಡಲಿದೆ. ಅತಿಥಿದೇವೋಭವ ಎಂಬುದು ನಮ್ಮ ಧ್ಯೇಯವಾಗಿದೆ. ಉಚಿತ ಊಟ, ಎರಡೂ ಮಾರ್ಗದಲ್ಲಿ ಎಸಿ ಬಸ್ ಸೇವೆ (ಶಿರಡಿಯಿಂದ ಔರಂಗಾಬಾದ್ ವಿಮಾನನಿಲ್ದಾಣ), ಲಕ್ಕಿ ಡ್ರಾ ಇನ್ನಿತರ ಸೇವೆಯನ್ನು ಒದಗಿಸಲಾಗುತ್ತದೆ.

ಟ್ರೂಜೆಟ್ ವಿಮಾನಗಳಲ್ಲಿ ಆಸನಗಳನ್ನು ಕಾದಿರಿಸಲು ಭೇಟಿಕೊಡಿ: www.trujet.com ಅಥವಾ ಕರೆ ಮಾಡಿ: +91 40 4090 4090 ಜೊತೆಗೆ ಆನ್‍ಲೈನ್ ಪೋರ್ಟಲ್ ಮತ್ತು ಟ್ರಾವೆಲ್ ಏಜೆಂಟರ ಮೂಲಕವೂ ಸೀಟು ಕಾದಿರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com