
ನವದೆಹಲಿ: ಆಗಸ್ಟ್ ತಿಂಗಳಲ್ಲಿ ಸಗಟು ದರ ಆಧಾರಿತ ಹಣದುಬ್ಬರ ಶೇ.(-)4 .05 ರಿಂದ ಶೇ.(-) 4 .95 ಕ್ಕೆ ಇಳಿಕೆಯಾಗಿದೆ. ಇಂಧನ ಬೆಲೆ ಕಡಿಮೆಯಾಗಿರುವುದು ಹಣದುಬ್ಬರ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ.
ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ವಾರ್ಷಿಕ ಹಣದುಬ್ಬರ ಕಳೆದ ವರ್ಷದ ಆಗಸ್ಟ್ ನಲ್ಲಿ ಶೇ.3 .85 ರಷ್ಟಿತ್ತು. ಪ್ರಸಕ್ತ ತಿಂಗಳಿನಲ್ಲಿ, ಈರುಳ್ಳಿ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕಳೆದ ವರ್ಷದ ಆಗಸ್ಟ್ ಗಿಂತ ಈ ವರ್ಷದಲ್ಲಿ ಶೇ.65 ರಷ್ಟು ಬೆಲೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದ್ದು ಆಹಾರಧಾನ್ಯಗಳೂ ಶೇ.36 ರಷ್ಟು ದುಬಾರಿಯಾಗಿವೆ.
ಇದೇ ವೇಳೆ ಆಲೂಗಡ್ಡೆ ಬೆಲೆ ಶೇ.52 ರಷ್ಟು ಹಾಗೂ ತರಕಾರಿ ಬೆಲೆ ಶೇ.21 ರಷ್ಟು ಇಳಿಕೆಯಾಗಿದೆ. ಉತ್ಪಾದಿತ ಉತ್ಪನ್ನಗಳ ವರ್ಗದಲ್ಲಿ ಆಹಾರಕ್ಕೆ ಸಂಬಂಧಿಸಿದ ಸರಕುಗಳ ಬೆಲೆ ಶೇ.19 ರಷ್ಟು ಇಳಿಕೆಯಾಗಿದೆ. ಇಂಧನ ಕ್ಷೇತ್ರದಲ್ಲಿ ಪೆಟ್ರೋಲ್ ಶೇ.13 .26 ರಷ್ಟು ಅಗ್ಗವಾಗಿದ್ದರೆ. ಡೀಸೆಲ್ ಶೇ.24 .54 ರಷ್ಟು ಅಗ್ಗವಾಗಿದೆ.
Advertisement