ದುಬಾರಿಯಾಗಲಿದೆ ಅಡುಗೆ ಎಣ್ಣೆ: ಆಮದು ಸುಂಕ ಶೇ.5ರಷ್ಟು ಏರಿಕೆ

ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಅಡುಗೆ ಎಣ್ಣೆ ಮೇಲೆ ಶೇ.5ರಷ್ಟು ಆಮದು ಸುಂಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಅಡುಗೆ ಎಣ್ಣೆ ಮೇಲೆ ಶೇ.5ರಷ್ಟು ಆಮದು ಸುಂಕ ಹೆಚ್ಚಿಸಿದೆ.

ಸ್ಥಳಿಯ ಕಾರ್ಖಾನೆಗಳನ್ನು ರಕ್ಷಿಸುವ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಜನ ಸಾಮಾನ್ಯರ ಮೇಲೆ ಹೊರೆಯಾಗಿರುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಹಿಂದೆ ಕಚ್ಚಾ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಶೇ.7.5ರಷ್ಟಿತ್ತು. ಈಗ ಶೇ.5ರಷ್ಟು ಏರಿಕೆಯಾಗಿರುವುದರಿಂದ ಕಚ್ಚಾ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಶೇ.12.5ರಷ್ಟಾಗಿದೆ. ಅಷ್ಟೇ ಅಲ್ಲದೇ, ರಿಫೈನ್ಡ್ ಆಯಿಲ್ ಮೇಲಿನ ಆಮದು ಸುಂಕವು ಹೆಚ್ಚಾಗಿದ್ದು, ಈ ಹಿಂದೆ ರಿಫೈನ್ಡ್ ಆಯಿಲ್ ಮೇಲಿನ ಆಮದು ಸುಂಕ ಶೇ.15ರಷ್ಟಿತ್ತು. ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಆಮದು ಸುಂಕ ಶೇ.20ರಷ್ಟಾಗಿದೆ.

ಕೇಂದ್ರ ಆಮದು ಸುಂಕು ಹೆಚ್ಚಿಸಿರುವ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಅಡುಗೆ ಎಣ್ಣೆ ದುಬಾರಿಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com