
ನವದೆಹಲಿ: ದುರ್ಬಲ ಮುಂಗಾರು, ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ, ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳುವಲ್ಲಿ ಹಿನ್ನಡೆ ಕಾರಣಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿಯನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಪರಿಷ್ಕರಿಸಿದ್ದು ಶೇ.7.8ರಿಂದ ಶೇ 7.4ಕ್ಕೆ ಇಳಿಸಿದೆ.
ಹಣದುಬ್ಬರ ಪ್ರಮಾಣ ಶೇ.4ರ ಪ್ರಮಾಣದಲ್ಲೇ ಇರಲಿದೆ ಎಂದು ಬ್ಯಾಂಕ್ ಹೇಳಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಬೇಳೆ ಕಾಳುಗಳಿಗೆ ಬೇಡಿಕೆ ಹೆಚ್ಚಿದಲ್ಲಿ ಭಾರತದ ಮಾರುಕಟ್ಟೆಯಲ್ಲಿ ದರಗಳು ಏರಿಕೆ ಕಾಣಲಿವೆ ಎಂದಿದೆ.
ಕೇಂದ್ರ ಸರ್ಕಾರ ಸುಧಾರಣೆ ಕೈಗೊಂಡಲ್ಲಿ ಮುಂದಿನ ಹಣಕಾಸು ಸಾಲಿನಲ್ಲಿ ದೇಶದ ಪ್ರಗತಿ ಶೇ.7.8ರಷ್ಟು ಇರಲಿದೆ ಎಂದು ಏಷ್ಯಾ ಅಭಿವೃದ್ಧಿ ಕುರಿತ ತನ್ನ ಮುನ್ನೋಟದಲ್ಲಿ ಹೇಳಿದೆ.
Advertisement