ಮಾಲಿನ್ಯ ಪ್ರಮಾಣ ವಂಚನೆ ಒಪ್ಪಿದ ವೋಕ್ಸ್ ವ್ಯಾಗನ್

ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ವೋಕ್ಸ್ ವ್ಯಾಗನ್ ಕಂಪನಿಯಲ್ಲಿನ ಬೆಳವಣಿಗೆ ವಿಶ್ವದ ಕಾರು ಉದ್ಯಮವನ್ನು ಬೆಚ್ಚಿಬೀಳಿಸಿದೆ.
ವೋಕ್ಸ್ ವ್ಯಾಗನ್
ವೋಕ್ಸ್ ವ್ಯಾಗನ್

ನ್ಯೂಯಾರ್ಕ್: ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ವೋಕ್ಸ್ ವ್ಯಾಗನ್ ಕಂಪನಿಯಲ್ಲಿನ ಬೆಳವಣಿಗೆ ವಿಶ್ವದ ಕಾರು ಉದ್ಯಮವನ್ನು ಬೆಚ್ಚಿಬೀಳಿಸಿದೆ.

ವೋಕ್ಸ್ ವ್ಯಾಗನ್ ‍ನ ಡೀಸೆಲ್ ಕಾರುಗಳಲ್ಲಿ ಹೊಗೆ ಹೊರಸೂಸುವಿಕೆ ಪ್ರಮಾಣ ಆ ಕಂಪನಿ ಹೇಳುವ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಹೆಚ್ಚು ಹೊಗೆ ಹೊರಸೂಸುತ್ತಿದ್ದರೂ ಕಡಿಮೆ ಎಂದು ತೋರಿಸುವಂತೆ ವಂಚಕ ಸಾಫ್ಟ್ ವೇರ್ ಅಳವಡಿಸಲಾಗಿತ್ತು ಎಂಬುವುದನ್ನು ಖುದ್ದು ಕಂಪನಿಯೇ ಒಪ್ಪಿಕೊಂಡಿದೆ. ಈ ಕುರಿತು ವೋಕ್ಸ್ ವ್ಯಾಗನ್  ಮಂಗಳವಾರ ನೀಡಿರುವ ಹೇಳಿಕೆ ಗಾಬರಿ ಹುಟ್ಟಿಸಿದೆ.

ಜಗತ್ತಿನಾದ್ಯಂತ ಸುಮಾರು 1.10 ಕೋಟಿ ಕಾರುಗಳಲ್ಲಿ ಹೀಗಾಗಿದೆ ಎಂದು ಕಂಪನಿ ಹೇಳಿದೆ. ಈ ಕಂಪನಿಗೆ ಅಮೆರಿಕ 180 ಕೋಟಿ ಡಾಲರ್ ದಂಡ ವಿಧಿಸುವ ಸಾಧ್ಯತೆಗಳಿವೆ. ಘಟನೆಗೆ ಸಂಬಂಧಿಸಿದಂತೆ ವೋಕ್ಸ್ ವ್ಯಾಗನ್ ಕಂಪನಿ ಸಿಇಒ ಮಾರ್ಟಿನ್ ವಿಂಟರ್ ಕಾರ್ನ್ ಮಂಗಳವಾರ ಗ್ರಾಹಕರ ಕ್ಷಮೆ ಯಾಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com