ಪೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಫ್ಲಿಪ್ ಕಾರ್ಟ್ ಸಂಸ್ಥಾಪಕರು

ಪ್ರಮುಖ ವಾಣಿಜ್ಯ ನಿಯತ ಕಾಲಿಕ ಫೋರ್ಬ್ಸ್ ಪಟ್ಟಿಯಲ್ಲಿ ಪ್ಲಿಪ್ ಕಾರ್ಟ್ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಶತ ಕೋಟ್ಯಾಧಿಪತಿಗಳಾಗಿ ...
ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್
ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್

ಮುಂಬಯಿ:  ಪ್ರಮುಖ ವಾಣಿಜ್ಯ ನಿಯತ ಕಾಲಿಕ ಫೋರ್ಬ್ಸ್ ಪಟ್ಟಿಯಲ್ಲಿ ಪ್ಲಿಪ್ ಕಾರ್ಟ್ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಶತ ಕೋಟ್ಯಾಧಿಪತಿಗಳಾಗಿ ಸ್ಥಾನ ಪಡೆದಿದ್ದಾರೆ.

ಬುಧವಾರ ಬಿಡುಗಡೆ ಮಾಡಿದ ಫೋರ್ಬ್ಸ್ ಪಟ್ಟಿಯಲ್ಲಿ  ಫ್ಲಿಪ್ ಕಾರ್ಟ್ ಸಂಸ್ಥಾಪಕರಾದ  ಈ ಇಬ್ಬರು ತಲಾ 1.3 ಬಿಲಿಯನ್ ಅಂದರೆ 8,582 ಕೋಟಿ ರೂಪಾಯಿ ಹಣ ಹೊಂದಿದ್ದಾರೆ.

ರಿಲಾಯನ್ಸ್ ಗ್ರೂಪ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಅತಿ ದೊಡ್ಡ ಶ್ರೀಮಂತರಾಗಿದ್ದಾರೆ. ಅಂಬಾನಿ 4.7 ಬಿಲಿಯನ್ ಡಾಲರ್ ಅಂದರೆ 127, 700 ಕೋಟಿ ಹಣ ಹೊಂದಿದ್ದಾರೆ.

ಸನ್ ಫಾರ್ಮಾಸ್ಯೂಟಿಕಲ್ ನ ದಿಲೀಪ್ ಶಾಂಘವಿ 2ನೇ ಸ್ಥಾನದಲ್ಲಿದ್ದರೇ, ವಿಪ್ರೋ ಅಧ್ಯಕ್ಷ ಅಜಿಂ ಪ್ರೇಮ್ ಜಿ ಫೋರ್ಬ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com