ಆಗ ನಿಮ್ಮ ಹೆಸರಿನಿಂದ ಆರಂಭಿಸಿ ಎಲ್ಲ ಮಾಹಿತಿ ರಿಟರ್ನ್ಸ್ ನಲ್ಲಿ ಭರ್ತಿಯಾಗಿರುತ್ತದೆ.ಹೀಗೆಮೊದಲೇ ಭರ್ತಿಯಾಗಿರುವ ರಿಟ ರ್ನ್ಸ್ ಓಪನ್ ಮಾಡಿ ಆದಾಯ, ಉಳಿತಾಯಕ್ಕೆ ಸಂಬಂಧಿಸಿದ ಮಾಹಿತಿ ಅಪ್‍ಲೋಡ್ ಮಾಡಿ ಸಲ್ಲಿಸಿದರಾಯಿತು. ಗ್ರಾಹಕ ಸ್ನೇಹಿಯಾದ ಈ ಯೋಜನೆಯನ್ನು ಮುಂದಿನ ಹಣಕಾಸು ವರ್ಷದಿಂದ ಅನುಷ್ಠಾನಕ್ಕೆ ತರಲು ಆದಾಯ ತೆರಿಗೆ ಇಲಾಖೆಯ ನೀತಿ ನಿರೂಪದ ಸಮಿತಿ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆ ಮೂಲಗಳು ಹೇಳಿವೆ.