ಹಳ್ಳಿ ತೆರಿಗೆದಾರರ ಮೇಲೆ ಐಟಿ ಕಣ್ಣು

ವಾರ್ಷಿಕ ರು.4 ಲಕ್ಷ ಆದಾಯವಿದ್ದರೂ ತೆರಿಗೆ ಪಾವತಿಸದ ಗ್ರಾಮೀಣ ಪ್ರದೇಶದ ಜನರ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಾರ್ಷಿಕ ರು.4 ಲಕ್ಷ ಆದಾಯವಿದ್ದರೂ ತೆರಿಗೆ ಪಾವತಿಸದ ಗ್ರಾಮೀಣ ಪ್ರದೇಶದ ಜನರ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ. ಹೆಚ್ಚೆಚ್ಚು ಮಂದಿ ತಮ್ಮ ಬಾಕಿಯಿರುವ ತೆರಿಗೆಗಳನ್ನು ಪಾವತಿಸಲು ಶುರು ಮಾಡಿದರೆ, ಆದಾಯ ತೆರಿಗೆಯ ಹೊರೆ ಇಳಿಯಲಿದೆ.

ತೆರಿಗೆ ವ್ಯಾಪ್ತಿಯೊಳಗೆ ಬರುವ ಆದಾಯ ಹೊಂದಿರುವವರು ಕನಿಷ್ಠ ಪಕ್ಷ ರಿಟರ್ನ್ಸ್ ಸಲ್ಲಿಸಲು ಆರಂಭಿಸಬೇಕು. 2ನೇ ಮತ್ತು 3ನೇ ಹಂತದ ನಗರಗಳಲ್ಲಿರುವ ಅನೇಕರು ತೆರಿಗೆ ಹಾಕ ಬಹುದಾದ ಆದಾಯ ಹೊಂದಿದ್ದರೂ ತೆರಿಗೆ ಪಾವತಿಸುತ್ತಿಲ್ಲ. ಈ ವ್ಯಾಪ್ತಿಗೆ ಬರುವವರ ಮೇಲೆ ನಾವು ಕಣ್ಣಿಡಲು ಆರಂಭಿಸಿದ್ದೇವೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ತಿಳಿಸಿದೆ.

ರು.4 ಲಕ್ಷದಷ್ಟು ಆದಾಯ ಹೊಂದಿರುವವರ ವ್ಯಾಪ್ತಿಯಲ್ಲಿ ಬರುವಶೇ.18-20ರಷ್ಟು ಮಂದಿ ನಮಗೆ ಸಿಗುತ್ತಿಲ್ಲ. ಯಾರು ತೆರಿಗೆ ಪಾವತಿಸುತ್ತಿಲ್ಲವೋ ಅಂಥವರು ತೆರಿಗೆ ಪಾವತಿಸುತ್ತಿರುವವರ ಹೊರೆಯನ್ನು ಹೆಚ್ಚಿಸಿದಂತೆ. ಅದಕ್ಕಾಗಿಯೇ ನಾವು ಹೆಚ್ಚೆಚ್ಚು ಮಂದಿಯನ್ನು ತೆರಿಗೆ ವ್ಯಾಪ್ತಿಯೊಳಗೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ ಸಿಬಿಡಿಟಿ ಮುಖ್ಯಸ್ಥೆ ಅನಿತಾ ಕಪೂರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com