ಬಡ್ಡಿ ದರ ಇಳಿಕೆ ಮಾಡಲಿರುವ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್?

ಸೆ.29 ರಂದು ಪ್ರಕಟಗೊಳ್ಳಲಿರುವ ಆರ್.ಬಿ.ಐ ನ ಹಣಕಾಸು ನೀತಿಯಲ್ಲಿ ಪ್ರಮುಖ ನೀತಿ ದರಗಳನ್ನು ಇಳಿಕೆ ಮಾಡುವ ಸಾಧ್ಯತೆ ಇದೆ.
ರಘುರಾಮ್ ರಾಜನ್
ರಘುರಾಮ್ ರಾಜನ್

ಮುಂಬೈ: ಸೆ.29 ರಂದು ಪ್ರಕಟಗೊಳ್ಳಲಿರುವ ಆರ್ ಬಿ ಐ ನ ಹಣಕಾಸು ನೀತಿಯಲ್ಲಿ ಪ್ರಮುಖ ನೀತಿ ದರಗಳನ್ನು ಇಳಿಕೆ ಮಾಡುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೆ.8 ರಂದು ಸಭೆ ನಡೆಸಿದ್ದ ಕೈಗಾರಿಕೋದ್ಯಮಿಗಳು ಬಡ್ಡಿ ದರವನ್ನು ಕಡಿಮೆಮಾಡುವಂತೆ ಒತ್ತಾಯಿಸಿದ್ದರು.ಆರ್ ಬಿ ಐ ಮುಂದಿನ ಹಣಕಾಸು ನೀತಿಯಲ್ಲಿ ಬಡ್ಡಿ ದರ ಕಡಿಮೆ ಮಾಡಿದರೆ ಬಂಡವಾಳ ಹೂಡಿಕೆಗೆ ಅನುಕೂಲವಗಾಲಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದರು. ಉದ್ಯಮಿಗಳ ಒತ್ತಾಯವನ್ನು ಪರಿಗಣಿಸಿರುವ ಆರ್.ಬಿ.ಐ ಗೌರ್ನರ್ ಬಡ್ಡಿ ದರವನ್ನು ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಮಧ್ಯಮ ಹಣದುಬ್ಬರದ ಮಟ್ಟ, ಹಾಗೂ ಅಮೇರಿಕಾದ ಫೆಡರಲ್ ರಿಸರ್ವ್( ವಿದೇಶಿ ವಿನಿಮಯ ಮೀಸಲು) ಯಥಾಸ್ಥಿತಿಯಲ್ಲಿ ಮುಂದುವರೆದಿರುವುದು ಹಾಗೂ ಆರ್ಥಿಕ ಚೇತರಿಕೆ ಉತ್ತೇಜಿಸುವ ಅಗತ್ಯತೆ ಈ ಎಲ್ಲಾ ಅಂಶಗಳು ರಘುರಾಮ್ ರಾಜನ್ ಅವರು ಬಡ್ಡಿ ದರ ಇಳಿಕೆ ಮಾಡಲಿದ್ದಾರೆ ಎಂಬ ನಿರೀಕ್ಷೆಗೆ ಪೂರಕವಾಗಿದೆ.
ಮಂಗಳವಾರ ಪ್ರಕಟವಾಗುವ ಹಣಕಾಸು ನೀತಿಯಲ್ಲಿ ಬಡ್ಡಿ ದರ ಕಡಿಮೆ ಮಾಡಿದರೆ 2015 ರ ಜನವರಿಯಿಂದ 4 ನೇ ಬಾರಿ ಬಡ್ಡಿ ದರ ಇಳಿಕೆಯಾಗಲಿದೆ. ಪ್ರಸಕ್ತ ಬಡ್ಡಿ ದರವನ್ನು ಶೇ.7 .25 ರಿಂದ ಶೇ.7 ಕ್ಕೆ ಇಳಿಕೆ ಮಾಡಿದ್ದೇ ಆದಲ್ಲಿ 100 ಬೇಸಿಸ್ ಪಾಯಿಂಟ್ ಗಳಲ್ಲಿ ಅಂತ್ಯಗೊಳ್ಳಲಿದೆ( 9 ತಿಂಗಳಲ್ಲಿ ಶೇ.1 ರಷ್ಟು ಬಡ್ಡಿ ದರ ಇಳಿಕೆಯಾಗಲಿದೆ) ಈ ಬಗ್ಗೆ ಮಾತನಾಡಿರುವ ಎಸ್.ಬಿ.ಐ ನ ಅಧ್ಯಕ್ಷ ಅರುಂಧತಿ ಬಟ್ಟಾಚಾರ್ಯ, ಮುಂಬರುವ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ನಗಣ್ಯವಾಗಿರುವುದರಿಂದ ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com