ರಿವರ್ಸ್‍ರೆಪೊ, ರೆಪೊ, ಸಿಆರ್‍ಆರ್ ಅಂದರೇನು

ಬ್ಯಾಂಕ್‍ಗಳು ವಹಿವಾಟು ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರೆಪೊ ದರ: ಬ್ಯಾಂಕ್‍ಗಳು ವಹಿವಾಟು ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್ ಬಿಐ ವಿಧಿಸುವ ಬಡ್ಡಿದರ ರೆಪೊ.

ರಿವರ್ಸ್ ರೆಪೊ: ಬ್ಯಾಂಕ್‍ಗಳು ತಮ್ಮಲ್ಲಿರುವ ಹಣವನ್ನು ಆರ್ ಬಿಐನಲ್ಲಿ ಠೇವಣಿ ಇಡುವುದಕ್ಕೆ ಸಿಗುವ ಬಡ್ಡಿದರ. ಕೆಲವೊಮ್ಮೆ ಬ್ಯಾಂಕ್‍ಗಳಲ್ಲಿ ಸಾಲಕ್ಕೆ ಬೇಡಿಕೆ ಕಡಿಮೆ ಇರಲಿದೆ.

ನಗದು ಮೀಸಲು ಅನಪಾತ (ಸಿಆರ್‍ಆರ್): ಬ್ಯಾಂಕ್‍ಗಳಲ್ಲಿ ಗ್ರಾಹಕರು ಠೇವಣಿ ಇಟ್ಟಿರುತ್ತಾರೆ. ಇದರಲ್ಲಿ ಬ್ಯಾಂಕ್‍ಗಳು ಇಂತಿಷ್ಟು ಪ್ರಮಾಣವನ್ನು ಆರ್ ಬಿಐನಲ್ಲಿ ಇಡಬೇಕು.
ಬ್ಯಾಂಕ್‍ಗಳು ನಷ್ಟ, ದಿವಾಳಿ, ಹಲವಾರು ದಿನ ವಹಿವಾಟು ನಡೆಯದಿದ್ದರೂ ಬ್ಯಾಂಕನ್ನು ಮುಂದುವರೆಸಬೇಕಾಗಲಿದೆ. ಅಂತಹ ಸಂದರ್ಭಗಳಿಗೆಂದು ಕಡ್ಡಾಯವಾಗಿ ಮೀಸಲು ಇಡಬೇಕು. ಇದಕ್ಕೆ ಆರ್ ಬಿಐ ಯಾವುದೇ ಬಡ್ಡಿ ನೀಡುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com