
ಮುಂಬೈ: ನನ್ನ ಹೆಸರು ರಘುರಾಂ ರಾಜನ್, ನಾನು ಅಂದುಕೊಂಡಿದ್ದನ್ನೇ ಮಾಡುವುದು. ರಘುರಾಂ ರಾಜನ್ ನಿರೀಕ್ಷೆಗಿಂತಲೂ ಹೆಚ್ಚು ಬಡ್ಡಿದರಗಳನ್ನು ಕಡಿತಗೊಳಿಸಿದಾಗ ಎಲ್ಲರೂ ಸಾಂತಾ ಕ್ಲಾಸ್ (ಕೇಳಿದ್ದಕ್ಕಿಂತಲೂ ಹೆಚ್ಚು ಕೊಡುವ) ಎಂದು ಕರೆಯುತ್ತಿದ್ದಾರೆ ಎಂಬುದಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ನೀವು ನನ್ನನ್ನು ಏನೆಂದು ಕರೆಯುತ್ತಾರೆ ಎಂದು ನನಗೆ ಗೊತ್ತಿಲ್ಲ. ನನ್ನನ್ನು ಸಾಂತಾಕ್ಲಾಸ್ ಎಂದಾದರೂ ಕರೆಯಿರಿ ಅಥವಾ ಧ್ವಂಸಕಾರಕ ಎಂದಾದರೂ ಕರೆಯಿರಿ. ಆದರೆ ನನ್ನ ಹೆಸರು ರಘುರಾಂ ರಾಜನ್ ನಾನು ಅಂದುಕೊಂಡಿ ದ್ದನ್ನೇ ಮಾಡುವುದು ಎಂದರು.
ಶೇ.0.50ರಷ್ಟು ಕಡಿತಗೊಳಿಸಿದ್ದೇಕೆ ಎಂಬ ಪ್ರಶ್ನೆಗೆ, ಸುಸ್ಥಿರತೆ ಮತ್ತು ಅಭಿ ವೃದ್ಧಿಯನ್ನು ಜೊತೆಯಲ್ಲಿ ಕೊಂಡೊಯ್ಯಬೇಕು ಎಂಬು ದನ್ನು ತೋರಿಸಲು ಕಡಿತಗೊಳಿಸಲಾಗಿದೆ. ಅದಕ್ಕಾಗಿಯೇ ನಮ್ಮಲ್ಲಿನ ಅವಕಾಶವನ್ನು ಬಳಸಿದ್ದೇವೆ ಎಂದು ರಾಜನ್ ಹೇಳಿದ್ದರು.
Advertisement