
ನವದೆಹಲಿ: ಮದುವೆ ಸೀಸನ್ ಬೇಡಿಕೆ ಹಿನ್ನೆಲೆಯಲ್ಲಿ ಹೊಸ ಖರೀದಿ ನಡೆದಿದ್ದರಿಂದ ಚಿನಿವಾರ ಪೇಟೆಯಲ್ಲಿ ಚಿನ್ನವು 180 ರೂ. ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂ.ಗೆ 29, 430 ರೂ. ತಲುಪಿದೆ.
ಕೈಗಾರಿಕೆ ಘಟಕಗಳು ಮತ್ತು ನಾಣ್ಯ ತಯಾರಕರ ಹೆಚ್ಚಿದ ಖರೀದಿಯಿಂದ ಬೆಳ್ಳಿ 50 ರೂ. ಏರಿಕೆ ಕಂಡಿದ್ದು ಪ್ರತಿ ಕೆಜಿಗೆ 38, 700 ರೂ. ತಲುಪಿದೆ.
ಮದುವೆ ಸೀಸನ್ ಬೇಡಿಕೆಯಿಂದ ಆಭರಣ ಅಂಗಡಿಗಳ ಹೊಸ ಖರೀದಿ ಭರಾಟೆಯಲ್ಲಿ ತೊಡಗಿದ್ದರ ಪರಿಣಾಮ ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಜಾಗತಿಕವಾಗಿ ಚಿನ್ನದ ದರ ಹೆಚ್ಚಳವಾದ ಪರಿಣಾಮ ಅಮೆರಿಕಾ ಮಾರುಕಟ್ಟೆಯಲ್ಲಿ ಚಿನ್ನ 0.7 ಪ್ರತಿಶತ ಏರಿಕೆ ಕಂಡಿದ್ದು, 10 ಔನ್ಸ್ ಚಿನ್ನದ ದರ 1,234.60 ಡಾಲರ್ ಮೊತ್ತಕ್ಕೆ ತಲುಪಿದೆ.
ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ 180 ರೂಪಾಯಿ ಏರಿಕೆಯಾಗಿದ್ದು, 99.9 ಪ್ರತಿಶತ ಶುದ್ದ ಚಿನ್ನದ ದರ 29,430 ರೂಪಾಯಿ ಮತ್ತು 99.5 ಪ್ರತಿಶತ ಶುದ್ದ ಚಿನ್ನದ ದರ 29,280 ರೂಪಾಯಿಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
Advertisement